ಕೋಲಾರ: ಕೋಲಾರದಲ್ಲಿ ಕಾಂಗ್ರೆಸ್ ಮುಖಂಡ ಚಂದ್ರಾರೆಡ್ಡಿ ನಿನ್ನೆ ಬೆಳಿಗ್ಗೆ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ರಿವರ್ಸ್ ಆಪರೇಷನ್ ಮಾಡಿ ಹಲವು ಬಿಜೆಪಿಗರನ್ನು ಕಾಂಗ್ರೆಸ್ ಗೆ ಸೇರಿಕೊಳ್ಳುವುದರ ಮೂಲಕ ಬಿಜೆಪಿಗೆ ಮರು ಉತ್ತರ ನೀಡಿದ್ದಾರೆ.
ನಿನ್ನೆ ಬೆಳಿಗ್ಗೆ ಕೋಲಾರದಲ್ಲಿ ಕಾಂಗ್ರೆಸ್ ಮುಖಂಡ ಚಂದ್ರಾರೆಡ್ಡಿ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಸಂಜೆಯೊಳಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ರಿವರ್ಸ್ ಆಪರೇಷನ್ ಮಾಡಿ, ಒಬ್ಬರ ಬದಲಿಗೆ ಹಲವು ಬಿಜೆಪಿಯ ತಾಲೂಕ ಪಂಚಾಯತಿ ಮುಖಂಡರನ್ನು ಕಾಂಗ್ರೆಸ್ ಗೆ ಸೇರಿಸಿಕೊಂಡಿದ್ದಾರೆ. ತಾ.ಪಂ. ಮಾಜಿ ಅಧ್ಯಕ್ಷ ವೆಂಕಟೇಶ್ ನಾಯ್ಕ, ಸದಸ್ಯರಾದ ಪಾಲಾಕ್ಷಿ ಓಬಣ್ಣ, ಮಾರಪ್ಪ, ಹುಲಗಪ್ಪ, ಚಂದ್ರಪ್ಪ ಮತ್ತಿತರರು ಸದಾಶಿವನಗರದ ಡಿಕೆ ಶಿವಕುಮಾರ್ ನಿವಾಸದಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ.
ಇದನ್ನೂ ಓದಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಮೊದಲ ಸುತ್ತಿನಲ್ಲಿಯೇ ಗೆಲುವು ಸಾಧಿಸುತ್ತದೆ… ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ….