ಉದಯ್ಪುರ : ಒಂದು ಫ್ಯಾಮಿಲಿ..ಒಂದೇ ಟಿಕೆಟ್ ಎಂಬ ಹೊಸ ರೂಲ್ಸ್ ಅನ್ನು ಕಾಂಗ್ರೆಸ್ ಮಾಡಿದ್ದು, ಈ ಬಗ್ಗೆ ಎಐಸಿಸಿ ಚಿಂತನ ಶಿಬಿರದಲ್ಲಿ ಸೋನಿಯಾ ಗಾಂಧಿ ನೇತೃತ್ವದಲ್ಲಿ ನಿರ್ಧಾರ ಮಾಡಲಾಗಿದೆ.
ರಾಜಸ್ಥಾನದ ಉದಯ್ಪುರದಲ್ಲಿ ಶಿಬಿರ ನಡೆಯುತ್ತಿದ್ದು, ರಾಹುಲ್, ಸೋನಿಯಾಗಾಂಧಿಗೆ ಈ ರೂಲ್ಸ್ ಅನ್ವಯ ಇಲ್ಲ.
ಮುಂದಿನ ಎಲೆಕ್ಷನ್ನಲ್ಲಿ ಇಬ್ಬರೂ ಸ್ಪರ್ಧೆ ಮಾಡಬಹುದು, ಪಕ್ಷಕ್ಕಾಗಿ 5 ವರ್ಷಕ್ಕಿಂತ ಹೆಚ್ಚು ಕಾಲ ದುಡಿದಿದ್ದರೆ ಮಾತ್ರ ಪರಿಗಣನೆ ಮಾಡಲಾಗುತ್ತದೆ. ಮುಂಬರುವ ಎಲೆಕ್ಷನ್ ಗೆಲ್ಲಲು ಕಾಂಗ್ರೆಸ್ ಟಿಕೆಟ್ ಫಾರ್ಮುಲಾ ರೂಪಿಸಿದ್ದು, ಪಕ್ಷದ ಹಾಲಿ ಹಿರಿಯ ನಾಯಕರಿಗೂ ಈ ಬಿಸಿ ತಟ್ಟುತ್ತಾ..? ಎಂದು ಕಾದು ನೋಡಬೇಕಿದೆ. ಲೀಡರ್ನ ಪುತ್ರ ಅಥವಾ ಪುತ್ರಿ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿರಬೇಕು, ಅಂತಾ ಪ್ರಕರಣಗಳಲ್ಲಿ ಮಾತ್ರ ಟಿಕೆಟ್ ನೀಡುವ ನಿರ್ಧಾರ ಮಾಡಲಾಗುತ್ತದೆ.
ಸಿದ್ದು, ಡಿಕೆಶಿ ಸೇರಿ ರಾಜ್ಯದ ಹಲವು ನಾಯಕರೂ ಶಿಬಿರದಲ್ಲಿ ಭಾಗಿಯಾಗಿದ್ದಾರೆ.