ಬೆಂಗಳೂರು: ದಿನದಿಂದ ದಿನಕ್ಕೆ ಅಮೆರಿಕದಲ್ಲಿ ಕೊರೋನ ಸೋಂಕು ಹೆಚ್ಚಾಗುತ್ತಿದ್ದು, ಡೆಡ್ಲಿ ವೈರಸ್ ರುದ್ರನರ್ತನಕ್ಕೆ ಅಮೆರಿಕ ತತ್ತಿರಿಸಿ ಹೋಗುತ್ತಿದೆ. ಕಳೆದ 24 ಗಂಟೆಯಲ್ಲಿ ಒಂದೂವರೆ ಲಕ್ಷ ಕೊರೋನಾ ಕೇಸ್ ಪತ್ತೆಯಾಗುತ್ತಿದ್ದು, ಕೊರೋನ ಮೂರನೇ ಅಲೆಯ ಅಬ್ಬರ ಶುರುವಾದಂತಿದೆ.
ಹೌದು, ಡೆಡ್ಲಿ ಕೊರೋನ ಪ್ರಪಂಚಕ್ಕೆ ವಕ್ಕರಿಸಿದ್ದೆ ವಕ್ಕರಿಸಿದ್ದು, ಅನೇಕ ಸಾವು ನೋವುಗಳಿಗೆ ಕಾರಣವಾಗಿ ಹೋಗಿದೆ. ಈ ಮಹಾಮಾರಿಗೆ ಅದೆಷ್ಟೋ ಜನ ಬಲಿಯಾಗಿ ಹೋಗಿದ್ದಾರೆ. ಇದೀಗ ಮತ್ತೆ ಅಮೆರಿಕದಲ್ಲಿ ಕೊರೋನ ಸೋಂಕು ಹೆಚ್ಚಾಗಿದ್ದು, ಬಹುತೇಕ ಕಡೆ ಆಕ್ಸಿಜನ್ ಸಿಗದೇ ಪರದಾಟ ಶುರುವಾಗಿದ್ದು, ಕಳೆದ 1 ವಾರದಲ್ಲಿ 7,214 ಅಧಿಕ ಮಂದಿ ಕೋವಿಡ್ಗೆ ಬಲಿಯಾಗಿದ್ದು,
ಡೆಲ್ಟಾ ತಳಿ ಪ್ರಭಾವದಿಂದಾಗಿ ಕೊರೋನಾ ಕೇಸ್ ಹೆಚ್ಚಾಗುತ್ತಿದೆ. ಪ್ರತೀ ಗಂಟೆಗೆ 500ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ಸೇರ್ತಿದ್ದಾರೆ.
ಈವರೆಗೆ ಅಮೆರಿಕದ ಶೇ.31ರಷ್ಟು ಮಂದಿಗೆ ಕೊರೋನಾ ಕಾಟ ಕೊಡುತ್ತಿದೆ ಎಂಬ ಸ್ಪೋಟಕ ಮಾಹಿತಿಯನ್ನ ಕೊಲಂಬಿಯಾ ಯೂನಿವರ್ಸಿಟಿ ರಿಪೋರ್ಟ್ ತಿಳಿಸಿದೆ.
ಇದನ್ನೂ ಓದಿ:#Flashnews ಬೆಂಗಳೂರಿನಲ್ಲಿ ಸೆಲೆಬ್ರಿಟಿ ಮನೆಗಳ ಮೇಲೆ ಪೊಲೀಸ್ ದಾಳಿ.. ಪತ್ತೆಯಾಗಿರುವ ಡ್ರಗ್ಸ್ ಎಷ್ಟು ಗೊತ್ತಾ.. ?