ಬೆಂಗಳೂರು: ಇಡೀ ದೇಶಕ್ಕೆ ಮತ್ತೆ ಓಮಿಕ್ರಾನ್ ಟೆನ್ಷನ್ ಶುರುವಾಗಿದ್ದು, ದೇಶದಲ್ಲಿ ಓಮಿಕ್ರಾನ್ ಸೋಂಕಿತರ ಸಂಖ್ಯೆ 40 ಕ್ಕೆ ಏರಿಕೆಯಾಗಿದೆ.
ಮಹಾರಾಷ್ಟ್ರದಲ್ಲಿ ನಿನ್ನೆ ಮತ್ತೆರಡು ಓಮಿಕ್ರಾನ್ ಕೇಸ್ ಪತ್ತೆಯಾಗಿದ್ದು, ಮಹಾರಾಷ್ಟ್ರದಲ್ಲಿ ಈವರೆಗೆ 20 ಓಮಿಕ್ರಾನ್ ಕೇಸ್ ದಾಖಲಾಗಿದೆ. ಮಹಾರಾಷ್ಟ್ರದಲ್ಲಿ -20, ಕರ್ನಾಟಕ-3, ಗುಜರಾತ್ -3 ಕೇಸ್, ರಾಜಸ್ಥಾನ -09, ದೆಹಲಿ -02 ಒಮಿಕ್ರೋನ್ ಕೇಸ್ ಪತ್ತೆಯಾಗಿದ್ದು, ರಾಜ್ಯದಲ್ಲೂ ಓಮಿಕ್ರಾನ್ ವೈರಸ್ ಟೆನ್ಷನ್ ಹೆಚ್ಚಾಗಿದೆ. ಹೈರಿಸ್ಕ್ ದೇಶಗಳಿಂದ ಆಗಮಿಸುವ ಪ್ರಯಾಣಿಕರ ಬಗ್ಗೆ ಭೀತಿ ಹೆಚ್ಚಾಗಿದ್ದು, ಈಗಾಗಲೇ ರಾಜ್ಯಕ್ಕೆ ಆಗಮಿಸಿರುವ 9 ಮಂದಿಗೆ ಪಾಸಿಟಿವ್ ಆಗಿದೆ.
ಇದನ್ನೂ ಓದಿ:ಕೊಡಗಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮತ್ತೆ ಕೋವಿಡ್ ಸ್ಫೋಟ…! ಶಾಲೆಗೆ DHO ವೆಂಕಟೇಶ್ ಭೇಟಿ..!