ಬೆಂಗಳೂರು: ಪ್ರಪಂಚಾದ್ಯಂತ ಕೊರೋನಾ ವೈರಸ್ ಸ್ಫೋಟಗೊಂಡಿದ್ದು, ಒಂದೇ ದಿನ ಬರೋಬ್ಬರಿ 14.4 ಲಕ್ಷ ಕೇಸ್ ದಾಖಲಾಗಿದೆ. 2019ರ ಬಳಿಕ ಇದೇ ಮೊದಲ ಬಾರಿಗೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ.
ಓಮಿಕ್ರಾನ್ ಎಫೆಕ್ಟ್ನಿಂದಾಗಿ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ವಿಶ್ವ ದಾಖಲೆಯಾಗಿದ್ದು, 2019ರ ಬಳಿಕ ಮೊದಲ ಬಾರಿ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಒಂದೇ ದಿನ ಅಮೆರಿಕದಲ್ಲಿ 2.29 ಲಕ್ಷ ಕೇಸ್, 823 ಮಂದಿ ಬಲಿಯಾಗಿದ್ದು, ಫ್ರಾನ್ಸ್, ಬ್ರಿಟನ್ನಲ್ಲೂ ತಲಾ ಒಂದು ಲಕ್ಷ ಕೇಸ್ ದಾಖಲಾಗಿದೆ. ಒಂದೇ ದಿನ ಸ್ಪೇನ್ನಲ್ಲಿ 50 ಸಾವಿರ ಕೇಸ್ ಪತ್ತೆಯಾಗಿದ್ದು, 30 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಕೊರೋನಾ ಹೆಚ್ಚಳಕ್ಕೆ ಓಮಿಕ್ರಾನ್ ವೈರಸ್ ಕಾರಣವಾಗಿದ್ದು, ಓಮಿಕ್ರಾನ್ ವೈರಸ್ನಿಂದಾಗಿಯೇ ಕೊರೋನಾ ಹೆಚ್ಚಳವಾಗುತ್ತಿದೆ.
ಇದನ್ನೂ ಓದಿ:ಓಮಿಕ್ರಾನ್ ಸೋಂಕು ಹೆಚ್ಚಳ…! ರಾಜ್ಯದಲ್ಲಿ ಓಮಿಕ್ರಾನ್ ಸೋಂಕಿತರ ಸಂಖ್ಯೆ 39ಕ್ಕೆ ಏರಿಕೆ…!