ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ಓಮಿಕ್ರಾನ್ ಆತಂಕ ಹೆಚ್ಚಾಗಿದ್ದು, ವಿದೇಶದಿಂದ ಬಂದಿದ್ದ ವ್ಯಕ್ತಿಗೆ ಕೊರೋನಾ ಪಾಸಿಟಿವ್ ಆಗಿದೆ. ಇದೀಗ ಸೋಂಕಿತನ ಗಂಟಲು ದ್ರವದ ಸ್ಯಾಂಪಲ್ ಅನ್ನು ಜೀನೋಮ್ ಟೆಸ್ಟ್ ಗಾಗಿ ಬೆಂಗಳೂರಿಗೆ ರವಾನೆ ಮಾಡಲಾಗಿದೆ.
ವಾರದ ಹಿಂದೆ ಯುಎಇ ಯಿಂದ ಕಲಬುರಗಿಗೆ ಬಂದಿದ್ದ ವ್ಯಕ್ತಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಈ ಹಿನ್ನೆಲೆ ಸೋಂಕಿತನ ಸ್ಯಾಂಪಲ್ ಅನ್ನ ಕಲಬುರಗಿ ಜಿಮ್ಸ್ ಆಸ್ಪತ್ರೆಯಿಂದ ಬೆಂಗಳೂರಿಗೆ ರವಾನೆ ಮಾಡಲಾಗಿದೆ. ವ್ಯಕ್ತಿ ವಿದೇಶದಿಂದ ಬಂದಿದ್ದ ಹಿನ್ನೆಲೆ ಓಮಿಕ್ರಾನ್ ಸೋಂಕು ಇದೆಯೇ ಎಂದು ತಿಳಿಯಲು ಆರೋಗ್ಯ ಇಲಾಖೆ ಮುಂದಾಗಿದೆ. ಜಿಮ್ಸ್ ಸಿಬ್ಬಂದಿ ಎರಡು ದಿನದ ಹಿಂದೆ ಸ್ಯಾಂಪಲ್ ನ್ನು ಬೆಂಗಳೂರಿಗೆ ಕಳುಹಿಸಿದ್ದು, ಸದ್ಯ ಸೋಂಕಿತ ವ್ಯಕ್ತಿಗೆ ಕಲಬುರಗಿ ಜಿಮ್ಸ್ ನಲ್ಲಿ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಸೋಂಕಿತ ವ್ಯಕ್ತಿ ಆರೋಗ್ಯದಲ್ಲಿ ಯಾವುದೇ ಸಮಸ್ಯೆಗಳಿಲ್ಲ.