ಬೆಂಗಳೂರು: ದೇಶದಲ್ಲಿ ರೂಪಾಂತರಿ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತಲಿದ್ದು, ಭಾರತದಲ್ಲಿ ಓಮಿಕ್ರಾನ್ ಕೇಸ್ 32ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ 7 ಹೊಸ ಕೇಸ್ ಪತ್ತೆ ಯಾಗಿದ್ದು, ಮತ್ತಷ್ಟು ಆತಂಕ ಹೆಚ್ಚಾಗಿದೆ.
ದೇಶದಲ್ಲಿ ರೂಪಾಂತರಿ ಓಮಿಕ್ರಾನ್ ನರ್ತನ ಶುರುಮಾಡಿದ್ದು, ಈವರೆಗೂ ಭಾರತದಲ್ಲಿ ಓಮಿಕ್ರಾನ್ ಕೇಸ್ 32ಕ್ಕೆ ಏರಿಕೆಯಾಗಿದ್ದು,
ಮಹಾರಾಷ್ಟ್ರದಲ್ಲಿ ಕೊರೋನಾ ರೂಪಾಂತರಿ ಓಮಿಕ್ರಾನ್ ಮಹಾಸ್ಫೋಟವಾಗಿದೆ. ಮುಂಬೈನಲ್ಲಿ 3 ಮತ್ತು ಪುಣೆಯಲ್ಲಿ 4 ಹೊಸ ಕೇಸ್ ಪತ್ತೆಯಾಗಿದ್ದು, ಮಹಾರಾಷ್ಟ್ರದಲ್ಲಿ ಓಮಿಕ್ರಾನ್ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ಯುಕೆ, ದಕ್ಷಿಣ ಆಫ್ರಿಕಾದಿಂದ ಬಂದವರಲ್ಲಿ ಓಮಿಕ್ರಾನ್ ಸೋಂಕು ದೃಢ ಪಟ್ಟಿದ್ದು, ಪುಣೆಯಲ್ಲಿ ಮೂರೂವರೆ ವರ್ಷದ ಮಗುವಿಗೂ ಹೊಸ ವೈರಸ್ ಕಾಣಿಸಿಕೊಂಡಿದೆ. ಈ ಹಿನ್ನೆಲೆ ಮುಂಬೈ, ಪುಣೆ, ನಾಗ್ಪುರದ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗುತ್ತಿದೆ. ಗುಜರಾತ್ನಲ್ಲೂ 2 ಹೊಸ ಓಮಿಕ್ರಾನ್ ಕೇಸ್ ಪತ್ತೆಯಾಗಿದ್ದು,
ಕರ್ನಾಟಕ, ಮಹಾರಾಷ್ಟ್ರ, ದೆಹಲಿ, ಗುಜರಾತ್ನಲ್ಲಿ ಆತಂಕ ಹೆಚ್ಚಾಗಿದೆ.
ಇದನ್ನೂ ಓದಿ:ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಸಿದ್ಧತೆ ಆರಂಭಿಸಿದ ಟೀಂ ಇಂಡಿಯಾ ನೂತನ ನಾಯಕ ರೋಹಿತ್ ಶರ್ಮಾ…