ವಿಜಯಪುರ : ಯುವಕನ ಪೋಸ್ಟ್ನಿಂದ ಹುಬ್ಬಳ್ಳಿಯಲ್ಲಿ ಹಿಂಸಾಚಾರದ ಬಗ್ಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಪ್ರತಿಕ್ರಿಯಿಸಿ ಕೆಜೆ ಹಳ್ಳಿ , ಡಿಜೆಹಳ್ಳಿ ತರಹದ ಘಟನೆ ನಡೆದಿದೆ. ಇದೊಂದು ವ್ಯವಸ್ಥಿತ ಸಂಚು ಎಂದು ಮೇಲ್ನೋಟಕ್ಕೆ ಕಾಣುತ್ತೆ. ಕಾನೂನು ಕೈಗೆತ್ತಿಕೊಳ್ಳೋರನ್ನ ಬಿಡುಗಡೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ಹೊಸಪೇಟೆಯಲ್ಲಿ ಅರಗ ಜ್ಞಾನೇಂದ್ರ ಮಾತನಾಡಿ ಇದು ವ್ಯವಸ್ಥಿತ ಸಂಚು ಎಂದು ಮೇಲ್ನೋಟಕ್ಕೆ ಕಾಣುತ್ತೆ.
ಮೊದಲೇ ಕಲ್ಲು ಸಂಗ್ರಹ ಮಾಡಿದ್ದಾರೆಂಬ ಮಾಹಿತಿ ಇದೆ. ಈಗಾಗಲೇ ಪೋಸ್ಟ್ ಹಾಕಿದ ವ್ಯಕ್ತಿ ಸೇರಿದಂತೆ ಹಲವರ ಬಂಧನ ಮಾಡಲಾಗಿದೆ. ನಾಲ್ವರು ಪೊಲೀಸರು ಹಾಗೂ ಕೆಲ ಸಿಬ್ಬಂದಿಗೆ ಗಾಯ ಆಗಿದೆ. ಓರ್ವ ಪಿಎಸ್ಐ ಅವರಿಗೆ ಗಂಭೀರ ಗಾಯ ಆಗಿದೆ. ಅವರನ್ನು ಹೆಚ್ಚಿನ ಚಿಕಿತ್ಸೆ ಗೆ ದಾಖಲು ಮಾಡಲಾಗಿದೆ. ಇದೊಂದು ಕೆ ಜೆ ಹಳ್ಳಿ ಡಿಜೆ ಹಳ್ಳಿ ತರವಾದ ಘಟನೆಯಾಗಿದೆ. ಪರಿಸ್ಥಿತಿ ಹತೋಟಿಗೆ ಬಂದಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಕಿಡಿ ಹೊತ್ತಿಸಿದ ಕಿಡಿಗೇಡಿಗಳು ಪೊಲೀಸರ ವಶ ..! ನಮ್ಮ ಮಕ್ಕಳನ್ನು ಕರ್ಕೊಂಡು ಹೋಗ್ಬೇಡಿ ಎಂದು ಪೋಷಕರ ಗೋಳಾಟ..