ತುಮಕೂರು : ದೇವೇಗೌಡರ ಕುಟುಂಬದಲ್ಲಿ ಅಪ್ಪ, ಮಕ್ಕಳು, ಮೊಮ್ಮಕ್ಕಳು ಲೂಟಿ ಹೊಡೆಯುತ್ತಿದ್ದಾರೆ ಎಂಬ ಸಚಿವ ಮಾಧುಸ್ವಾಮಿ ಹೇಳಿಕೆ ವಿಚಾರದ ಬಗ್ಗೆ ದೇವೇಗೌಡರು ಕಂಟ್ರಾಕ್ಟರ್ ಆಗಿ ಕೆಲಸ ಶುರುಮಾಡಿದಾಗ, ಮಾಧುಸ್ವಾಮಿಗೆ ಚಡ್ಡಿ ಹಾಕೋಕೆ ಬರುತ್ತಿರಲಿಲ್ಲ, ಇವತ್ತು ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡುತ್ತಿದ್ದಾರೆಂದು ಚಿಕ್ಕನಾಯಕನಹಳ್ಳಿ ತಾಲೂಕು ಒಕ್ಕಲಿಗರ ಸಂಘದವರು ಹೇಳಿದ್ಧಾರೆ.
ಚಿಕ್ಕನಾಯಕನಹಳ್ಳಿ ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ಶ್ರೀ ಹರ್ಷ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಲಾಗಿದ್ದು, ತಾಲೂಕು ಒಕ್ಕಲಿಗರ ಸಂಘ ಸುದ್ದಿಗೋಷ್ಠಿಯಲ್ಲಿ ಸಚಿವ ಮಾಧುಸ್ವಾಮಿಗೆ ಪದೇ ಪದೇ ಒಕ್ಕಲಿಗರನ್ನ ಕೆಣಕುವ ಕೆಲಸ ಮಾಡ್ತಿದ್ದೀರಾ.. ಒಕ್ಕಲಿಗರ ತಂಟೆಗೆ ಬಂದ್ರೆ ತಕ್ಕಪಾಠ ಕಲಿಸೋದಾಗಿ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ : ನಾನು ಪಾಕಿಸ್ತಾನಕ್ಕೆ ಹೋಗಲ್ಲ.. ಇಲ್ಲೇ ಇರ್ತೀನಿ… ರಚ್ಚೆ ಹಿಡಿದು ಕುಳಿತ ಪಾಕ್ ಮೂಲದ ಮಹಿಳೆ…