ಮಂಗಳೂರು: ಒಕ್ಕಲಿಗ ಸಮುದಾಯ ನನ್ನ ಜೊತೆ ನಿಲ್ಲಬೇಕು, ಯಾವುದೇ ಸಮಸ್ಯೆ ಬಂದರೂ ನಾನು ಸಮಾಜದ ಜೊತೆಗಿದ್ದೇನೆ. ಶೇ.12ರಷ್ಟು ಮೀಸಲಾತಿ ಬೇಡಿಕೆ ಹಲವು ವರ್ಷಗಳದ್ದಾಗಿದೆ, ಸಚಿವ ಆರ್.ಅಶೋಕ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ ಎಂದು ಪುತ್ತೂರಿನಲ್ಲಿ ಭೈರವೈಕ್ಯ ಬಾಲಗಂಗಾಧರನಾಥ ಶ್ರೀ ಜಯಂತೋತ್ಸವದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.