ಉಡುಪಿ: ಬಿತ್ತನೆ ಬೀಜ ಮತ್ತು ಗೊಬ್ಬರ ವಿತರಣೆಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದು, ರೈತರು ಬಿತ್ತನೆ ಬೀಜ ಮತ್ತು ರಸಗೊಬ್ಬರಕ್ಕಾಗಿ ಮಳೆಯಲ್ಲಿ ಕಾದು ಕುಳಿತಿದ್ದಾರೆ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೃಷಿ ಇಲಾಖೆಯ ಕಚೇರಿಯ ಅಧಿಕಾರಿಗಳು ಒಂದೇ ಕಂಪ್ಯೂಟರ್ ಉಪಯೋಗಿಸಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ವಿತರಿಸುತ್ತಿದ್ದಾರೆ ಈ ಹಿನ್ನೆಲೆಯಲ್ಲಿ800 ಕ್ಕೂ ಹೆಚ್ಚು ರೈತರು, ರೈತ ಮಹಿಳೆಯರು ಮುಂಜಾನೆಯಿಂದ ಮಳೆಯಲ್ಲಿ ಕಚೇರಿ ಮುಂಭಾಗದಲ್ಲಿ ಕಾದು ಕುಳಿತಿದ್ದಾರೆ. ಅಧಿಕಾರಿಗಳು ರೈತರಿಗೆ ಒಂದೇ ದಿನದಲ್ಲಿ ಬಿತ್ತನೆ ಬೀಜ ಮತ್ತು ಗೊಬ್ಬರ ವಿತರಣೆಗೆ ಮುಂದಾಗಿದ್ದಾರೆ. ಸ್ಥಳೀಯ ಶಾಸಕ ಸುಕುಮಾರ್ ಶೆಟ್ಟಿ ರೈತರ ಸಮಸ್ಯೆಯನ್ನು ಆಲಿಸಲು ಮುಂದಾಗಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿ : ಮಂಜುನಾಥ್
ಸ್ಥಳ : ಉಡುಪಿ
ಇದನ್ನೂ ಓದಿ : ಕೆಆರ್ಎಸ್ ಜಲಾಶಯದ ಒಳ ಹರಿವು ಹೆಚ್ಚಳ..! ಜಲಾಶಯದ ನೀರಿನ ಮಟ್ಟ 101.72 ಅಡಿ ದಾಖಲು..! ಈ ವರ್ಷ ಬೇಸಿಗೆಯಲ್ಲೂ ಉತ್ತಮ ನೀರಿನ ಸಂಗ್ರಹ..!