ಬೆಂಗಳೂರು : ಕುಖ್ಯಾತ ರೌಡಿ ಸೈಲೆಂಟ್ ಸುನೀಲನ ಬಿಡಲ್ಲ, ಸುನೀಲನ ಕರೆದು ವಿಚಾರಣೆ ಮಾಡೇ ಮಾಡುತ್ತೀವಿ ಎಂದು CCB ಜಂಟಿ ಪೊಲೀಸ್ ಕಮಿಷನರ್ ಡಾ.ಶರಣಪ್ಪ ಹೇಳಿದ್ದಾರೆ.
ಬಿಟಿವಿ ವರದಿ ಬೆನ್ನಲ್ಲೇ ಸೈಲೆಂಟ್ ಸುನೀಲ್ಗೆ ಶಾಕ್ ಆಗಿದ್ದು, ಸೈಲೆಂಟ್ ಸುನೀಲನ ವಶಕ್ಕೆ ಪಡೆದು ವಿಚಾರಣೆಗೆ ಆರ್ಡರ್ ಮಾಡಿದ್ದಾರೆ. ಸೈಲೆಂಟ್ ಸುನೀಲ CCB ರೇಡ್ ವೇಳೆ ಮನೆಯಲ್ಲಿ ಇರಲಿಲ್ಲ. ಸೈಲೆಂಟ್ ಸುನೀಲ್ ನಿನ್ನೆ ಓಪನ್ ಸ್ಟೇಜ್ನಲ್ಲಿ ಕಾರ್ಯಕ್ರಮ ಮಾಡಿದ್ದರು. ಇದೀಗ ಸೈಲೆಂಟ್ ಸುನೀಲ್ ಕರೆಸಲು ಡಾ.ಶರಣಪ್ಪ ಸೂಚನೆ ನೀಡಿದ್ದಾರೆ.
CCB ಜಂಟಿ ಪೊಲೀಸ್ ಕಮಿಷನರ್ ಡಾ.ಶರಣಪ್ಪ ಖಡಕ್ ಆರ್ಡರ್ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿದ ಡಾ.ಶರಣಪ್ಪ ಯಾವುದೇ ರೌಡಿ ಶೀಟರ್ ಬಿಡೋದಿಲ್ಲ. ಯಾರ ಒತ್ತಡವೂ ನಡೆಯಲ್ಲ, ಸೈಲೆಂಟ್ ಸುನೀಲನನ್ನು ಕರೆತಂದು ವಿಚಾರಣೆ ಮಾಡ್ತೇವೆ, ಕಳೆದ ವಾರ ಆ್ಯಕ್ಟೀವ್ ರೌಡಿಗಳ ಮೇಲೆ ರೇಡ್ ಮಾಡಿದ್ದೇವು. CCB, ಕೋತಿ ರಾಮ, ರಾಜೇಂದ್ರ, ಸೈಕಲ್ ರವಿ, ವಿಲ್ಸನ್ ಗಾರ್ಡನ್ ನಾಗ, ಸ್ಟಾರ್ ನವೀನ ಸೇರಿ 86 ರೌಡಿಗಳ ಮನೆ ಮೇಲೆ ರೇಡ್ ಆಗಿತ್ತು, ರೌಡಿಸಂನ ದೊಡ್ಡ-ದೊಡ್ಡ ತಲೆಗಳು ಸಿಸಿಬಿಗೆ ಲಾಕ್ ಆಗಿರಲಿಲ್ಲ, ಅಂದು ಸಿಗದ ಒಬ್ಬೊಬ್ಬರ ಪ್ರತ್ಯೇಕ ವಿಚಾರಣೆ ಮಾಡಿರುವ ಸಿಸಿಬಿ, ಸೈಲೆಂಟ್ ಸುನೀಲ್ನ ಮಾಹಿತಿ ಸಂಗ್ರಹ ಮಾಡುತ್ತಿದ್ದನು. ಸಿಸಿಬಿ, ಹೀಗಾಗಿ ನಿನ್ನೆಯ ಕಾರ್ಯಕ್ರಮದಲ್ಲಿ ಸುನೀಲನ ಅರೆಸ್ಟ್ ಮಾಡಿಲ್ಲ,
ವಶಕ್ಕೆ ಪಡೆದು ವಿಚಾರಣೆ ಮಾಡಲು ಆದೇಶ ನೀಡಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ : ಚಿತ್ರರಂಗಕ್ಕೆ ಲವ್ಲಿ ಸ್ಟಾರ್ ಪ್ರೇಮ್ ಪುತ್ರಿ ಎಂಟ್ರಿ… ‘ಟಗರು ಪಲ್ಯ’ಕ್ಕೆ ಬಟ್ಟಲು ಕಣ್ಣಿನ ಹುಡುಗಿ ಅಮೃತ ಪ್ರೇಮ್ ನಾಯಕಿ…