ಯಾದಗಿರಿ : ಕ್ಯಾಬಿನೆಟ್ ವಿಸ್ತರಣೆಗೆ ಸಂಬಂಧಿಸಿದಂತೆ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಪ್ರತಿಕ್ರಿಯಿಸಿ ನಾನು 100 % ಔಟ್ ಆಗುವುದಿಲ್ಲ, ನಾನು 32 ವರ್ಷದಿಂದ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಒಳ್ಳೆಯ ಕೆಲಸ ಮಾಡ್ತಾ ಇದ್ದೀನಿ. ಇನ್ , ಔಟ್ ಅಂತ ಪಕ್ಷದಿಂದ ಯಾವುದೇ ಸೂಚನೆಗಳು ಬಂದಿಲ್ಲ. ನಮ್ಮ ಪಕ್ಷದಿಂದಾಗಲಿ, ಅಧ್ಯಕ್ಷ ರಿಂದಾಗಲಿ ಸೂಚನೆ ಬಂದಿಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ಯಾದಗಿರಿಯಲ್ಲಿ ಮಾತನಾಡಿದ ಪ್ರಭು ಚವ್ಹಾಣ್ ಟಿವಿಯವರು ಟಿಆರ್ಪಿ ಗೋಸ್ಕರ ನ್ಯೂಸ್ ಮಾಡ್ತಾ ಇದೀರಿ. ಹೈ ಕಮಾಂಡ್ ಯಾವುದೇ ಸೂಚನೆ ನೀಡಿಲ್ಲ. ಹೈ ಕಮಾಂಡ್ ಏನ್ ನಿರ್ಧಾರ ತೆಗೆದುಕೊಳ್ಳುತ್ತೋ ಅದಕ್ಕೆ ನಾವು ಬದ್ಧ. ನಾನು ಪಶುಸಂಗೋಪನೆ ಇಲಾಖೆಯಲ್ಲಿ ಒಳ್ಳೆಯ ಕೆಲಸ ಮಾಡಿದ್ದೀನಿ. ವಿಧಾನಸಭಾ ಕ್ಷೇತ್ರಕ್ಕೊಂದು ಪಶು ಚಿಕಿತ್ಸೆ ಆಂಬ್ಯುಲೆನ್ಸ್ ನೀಡಲಾಗಿದೆ. ಹೀಗಾಗಿ ನನಗೆ ವಿಶ್ವಾಸವಿದೆ ನಾನು 100 % ಔಟ್ ಆಗುವುದಿಲ್ಲ ಎಂದು ತಿಳಿಸಿದ್ದಾರೆ.
ಇನ್ನೂ ಇದೇ ವೇಳೆ ಪಿಎಸ್ಐ ಅಕ್ರಮ ನೇಮಕಾತಿಯಲ್ಲಿ ಶಾಸಕ ರಾಜುಗೌಡ ಹೆಸರು ಪ್ರಸ್ತಾಪಿಸಿದ್ದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ರಾಜುಗೌಡ ಪಾರ್ಟಿಯ ಶಿಸ್ತಿನ ಸಿಪಾಯಿ. ಅವರ ಹೆಸರು ಡ್ಯಾಮೇಜ್ ಮಾಡುವುದಕ್ಕೆ ಈ ರೀತಿಯ ಹೇಳಿಕೆ ನೀಡಿದ್ದಾರೆ. ರಾಜುಗೌಡ ಕ್ಲೀನ್ ಮನುಷ್ಯ, ಒಳ್ಳೆಯ ಮನುಷ್ಯ, ಎಸ್ ಪಿ ಹಾಗೂ ಲೋಕಾಯುಕ್ತ ಪರಿಶೀಲನೆ ನಡೆಸುತ್ತಾರೆ. ಕಾನೂನು ಪ್ರಕಾರ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ : ಬಿ.ವೈ. ವಿಜಯೇಂದ್ರ ಸಂಪುಟ ಸೇರ್ಪಡೆಗೆ ಗ್ರೀನ್ ಸಿಗ್ನಲ್… ಬಿಜೆಪಿ ವರಿಷ್ಠರಿಂದ ಬಿಎಸ್ವೈಗೆ ಭರವಸೆ…