ಬೆಳಗಾವಿ : ವಾಯುವ್ಯ ಶಿಕ್ಷಕರ ಕ್ಷೇತ್ರದ ಫಲಿತಾಂಶ ಬಂದಿದ್ದು, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತೆ ಗೆದ್ದು ಬೀಗಿದ್ದಾರೆ.
ವಾಯುವ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಜಯಗಳಿಸಿದ್ಧಾರೆ. ಬಿಜೆಪಿ ಅಭ್ಯರ್ಥಿ ಅರುಣ್ ಶಹಪುರ ಗೆ ಮುಖಭಂಗವಾಗಿದೆ. ವಿರೋಧದ ನಡುವೆಯೂ ಸ್ವರ್ಧೆ ಮಾಡಿದ್ದ ಅರುಣ್ ಶಹಾಪುರಗೆ ಮತದಾರರು ಪಾಠ ಕಲಿಸಿದ್ದಾರೆ.
ಪ್ರಕಾಶ್ ಹುಕ್ಕೇರಿ ಗೆಲುವಿನಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮ್ಯಾಜಿಕ್ ಮಾಡಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ ತಮ್ಮ ಪ್ರಾಬಲ್ಯ ಸಾಬೀತು ಪಡಿಸಿದ್ದಾರೆ. ಜಾರಕಿಹೊಳಿ ಕುಟುಂಬಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್ ಕಂಟಕ, ಕಳೆದ ಬಾರಿ ವೈಯಕ್ತಿಕ ನಿಂದನೆಗೂ ಒಳಗಾಗಿದ್ದರು. ಸಾಹುಕಾರ ಕುಟುಂಬದ ಜೊತೆ ಪೈಪೋಟಿಯಲ್ಲಿ ಮತ್ತೆ ಕಾಂಗ್ರೆಸ್ಗೆ ಒಲಿದ ವಿಜಯವಾಗಿದೆ. ಗೆಲುವು ಹುಕ್ಕೇರಿಗೆ ಆದರೂ ಲಕ್ಷ್ಮಿ ಹೆಬ್ಬಾಳ್ಕರ್ ಹಿರಿ ಹಿರಿ ಹಿಗ್ಗಿದ್ದಾರೆ.
ಇದನ್ನೂ ಓದಿ : ರಾಜಕುಮಾರನಿಲ್ಲದ ಅರಮನೆಯನ್ನು ಭಾರದ ಮನಸ್ಸಿನಿಂದಲೇ ಬಿಟ್ಟು ಬಂದ ಅಪ್ಪು ಗನ್ಮ್ಯಾನ್ ಚಲಪತಿ..!