ಸಿಯೊಲ್ : ಬಂದಿದ್ದು ಒಂದೇ ಕೇಸ್, ಇಡೀ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದ್ದು, ಉತ್ತರ ಕೊರಿಯಾದಲ್ಲಿ ಮೊದಲ ಕೊರೋನಾ ಕೇಸ್ ಪತ್ತೆಯಾಗಿದ್ದು, ಸೋಂಕು ತಡೆಗೆ ‘ತೀವ್ರ ರಾಷ್ಟ್ರೀಯ ತುರ್ತು ಪರಿಸ್ಥಿತಿ’ ಘೋಷಣೆ ಮಾಡಲಾಗಿದೆ.
ಕೊರೊನಾ ನಿರ್ಮೂಲನೆಗೆ ಕಿಮ್ ಜೊಂಗ್ ಉನ್ ಪ್ರತಿಜ್ಞೆ ಮಾಡಿದ್ದಾರೆ. ಕೊರೋನಾ 2019ರಿಂದಲೂ ಉತ್ತರ ಕೊರಿಯಾಗೆ ಸುಳಿದಿರಲಿಲ್ಲ. ಇದೀಗ ವ್ಯಕ್ತಿಗೆ ಓಮೈಕ್ರಾನ್ ಸೋಂಕು ತಗುಲಿರುವುದು ದೃಢವಾಗಿದೆ. ಕೂಡಲೇ ಪಾಲಿಟ್‌ಬ್ಯೂರೋದ ತುರ್ತು ಸಭೆ ಕರೆದು, ಲಾಕ್‌ಡೌನ್ ಮಾಡುವಂತೆ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಉತ್ತರ ಕೊರಿಯಾದಲ್ಲಿ 2.50 ಕೋಟಿ ಜನ ಸಂಖ್ಯೆ ಹೊಂದಿದ್ದಾರೆ. ರಾಷ್ಟ್ರೀಯ ಲಾಕ್‌ಡೌನ್ ಘೋಷಣೆ ಮಾಡಿದ ಕಿಮ್. 2020ರಲ್ಲಿ ನಡೆದಿತ್ತು 13259 ಮಂದಿಗೆ ಕೊರೋನಾ ಟೆಸ್ಟ್ ಮಾಡಿಸಲಾಗಿತ್ತು. ವಿಶ್ವ ಸಂಸ್ಥೆ ಸೂಚನೆ ಮೇರೆಗೆ ಕೊರೋನಾ ಟೆಸ್ಟ್ ನಡೆದಿತ್ತು.
ಇದನ್ನೂ ಓದಿ : ಸಂಪುಟ ವಿಸ್ತರಣೆಗೆ ವರಿಷ್ಠರು ಅನುಮತಿ ನೀಡಿದ್ದಾರೆ.. ವಲಸಿ ಮಂತ್ರಿಗಳ ಭವಿಷ್ಯದ ಬಗ್ಗೆ ಗೊತ್ತಿಲ್ಲ : ಬಿಎಸ್ವೈ..!