ಬೆಂಗಳೂರು: ಕರ್ನಾಟಕದಲ್ಲೂ ಒಮಿಕ್ರಾನ್ ಬಗ್ಗೆ ಭಾರೀ ಆತಂಕ ಶುರುವಾಗಿದ್ದು, ಕಳೆದೆರಡು ವರ್ಷಗಳಿಂದ ಮುಚ್ಚಿದ್ದ ಶಾಲಾ-ಕಾಲೇಜು ಇತ್ತೀಚೆಗಷ್ಟೆ ತೆರೆದಿದ್ದು, ರೆಗ್ಯುಲರ್ ಕ್ಲಾಸ್ ಶುರುವಾಗಿತ್ತು. ಆದರೆ ಇದೀಗ ಮತ್ತೆ ಕೊರೋನಾ ರೂಪಾಂತರಿ ಕಾಟ ಹೆಚ್ಚಾಗುತ್ತಿದ್ದು, ಮತ್ತೆ ಆನ್ಲೈನ್ ಕ್ಲಾಸ್ ಶುರುಮಾಡಿ ಈ ವರ್ಷ ರೆಗ್ಯುಲರ್ ತರಗತಿ ಬೇಡ ಎಂದು ಪೋಷಕರು ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದಾರೆ.
ಹೌದು, ಆಫ್ರಿಕಾ ಹೊಸ ರೂಪಾಂತರಿ ಶರವೇಗದಲ್ಲಿ ಹಬ್ಬುತ್ತಿದ್ದು, ಈಗಾಗಲೇ ಹಲವು ದೇಶಗಳಲ್ಲಿ ಕಠಿಣ ಕ್ರಮಗಳನ್ನ ಕೈಗೊಳ್ಳಲಾಗಿದೆ. ಕರ್ನಾಟಕದಲ್ಲೂ ಒಮಿಕ್ರಾನ್ ರೂಪಾಂತರಿಯಿಂದ ಜನರಲ್ಲಿ ಫುಲ್ ಟೆನ್ಷನ್ ಶುರುವಾಗಿದ್ದು, ಧಾರವಾಡ, ಆನೇಕಲ್ ಪ್ರಕರಣಗಳಿಂದ ಕರ್ನಾಟಕ ಬೆಚ್ಚಿಬಿದ್ದಿದೆ.
ಮಕ್ಕಳನ್ನ ಶಾಲೆಗೆ ಕಳುಹಿಸಬೇಕೋ ಬೇಡವೋ ಎಂದು ಭಾರೀ ಆತಂಕದಲ್ಲಿ ಕರ್ನಾಟಕದ ಪೋಷಕರಿದ್ದು, ಮಕ್ಕಳನ್ನು ಶಾಲೆ ಕಾಲೇಜುಗಳಿಗೆ ಕಳುಹಿಸಿದರೆ ಏನು ಗತಿ, ಕೊರೋನಾ ಎಲ್ಲೆಲ್ಲಿಂದ ಹೇಗೆ ಹೇಗೆ ವಕ್ಕರಿಸುತ್ತೋ ಯಾರಿಗೆ ಗೊತ್ತು, ಮಕ್ಕಳನ್ನು ಶಾಲೆಗೆ ಕಳುಹಿಸಿ ಹೆಚ್ಚು- ಕಮ್ಮಿಯಾದರೆ ಯಾರು ಹೊಣೆ ಎಂದು ಪೋಷಕರು ಮತ್ತೆ ಆನ್ಲೈನ್ ಕ್ಲಾಸ್ ಶುರುಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಈ ವರ್ಷ ರೆಗ್ಯುಲರ್ ಕ್ಲಾಸ್ ಬೇಡ್ವೇ ಬೇಡ, ಕೊರೋನಾ ಸಂಪೂರ್ಣವಾಗಿ ಕಡಿಮೆಯಾಗುವವರೆಗೂ ಆಗೋವರೆಗೆ ಶಾಲೆ-ಕಾಲೇಜು ಬೇಡ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ಪೋಷಕರು ಒತ್ತಾಯ ಮಾಡುತ್ತಿದ್ದಾರೆ.
ಇದನ್ನೂ ಓದಿ: 16 ಕೋಟಿಗೆ ಬೇಡಿಕೆ ಇಟ್ಟ ಆಫ್ಘನ್ ಸ್ಪಿನ್ನರ್ ರಶೀದ್ ಖಾನ್… ಸಂಕಷ್ಟಕ್ಕೆ ಸಿಲುಕಿದ ಸನ್ ರೈಸರ್ಸ್ ಹೈದರಾಬಾದ್…