ಮಂಗಳೂರು: ಕ್ಲಾಸ್ ಒಳಗೆ ಹಿಜಾಬ್ಗೆ ಅವಕಾಶ ಇಲ್ಲದಂತಾಗಿದ್ದು, ಕೌನ್ಸಿಲಿಂಗ್ ಮೂಲಕ ವಿದ್ಯಾರ್ಥಿನಿಯರ ಮನವೊಲಿಕೆಗೆ ಎಸ್ಡಿಎಂಸಿ ಮೀಟಿಂಗ್ನಲ್ಲಿ ನಿರ್ಧಾರ ಮಾಡಲಾಗಿದೆ.
ಕ್ಲಾಸ್ ಒಳಗೆ ಹಿಜಾಬ್ಗೆ ಅವಕಾಶ ಇಲ್ವೇ ಇಲ್ಲ, ವಿದ್ಯಾರ್ಥಿನಿಯರಿಗೆ ಕೌನ್ಸಿಲಿಂಗ್ ಮಾಡಬೇಕು. ಒಪ್ಪದೇ ಇದ್ದರೆ ಬೇರೆ ಕಾಲೇಜಿಗೆ ಹೋಗಲು ಅವಕಾಶ ಕೋಡಲಾಗುತ್ತದೆ ಎಂದು ಮಂಗಳೂರಿನ SDMC ಮೀಟಿಂಗ್ನಲ್ಲಿ ನಿರ್ಧಾರ ಮಾಡಲಲಾಗಿದೆ. MLA ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಮೀಟಿಂಗ್ ಮಾಡಲಾಗಿದ್ದು, ಮಂಗಳೂರು ವಿವಿ ಘಟಕ ಕಾಲೇಜಿನಲ್ಲಿ ವಿವಾದ ಸೃಷ್ಟಿಯಾಗಿತ್ತು. ಕೆಲ ವಿದ್ಯಾರ್ಥಿನಿಯರು ಕ್ಲಾಸ್ಗೆ ಹಿಜಾಬ್ ಧರಿಸಿ ಬರ್ತಿರೋ ಆರೋಪದ ಹಿನ್ನೆಲೆ ಕಾಲೇಜು ಆವರಣದಲ್ಲೇ ಕೆಲ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದರು. ನಮಗೂ ಕೇಸರಿ ಶಾಲು ಧರಿಸಲು ಬಿಡಿ ಎಂದು ಪಟ್ಟು ಹಿಡಿದಿದ್ದರು, ನಿನ್ನೆ ಸಂಜೆ ಮೀಟಿಂಗ್ ಕರೆದಿದ್ದ ಎಸ್ಡಿಎಂಸಿ ಅಧ್ಯಕ್ಷ ಕಾಮತ್, ಮಂಗಳೂರು ವಿವಿ ಉಪಕುಲಪತಿ ಡಾ.ಸುಬ್ರಹ್ಮಣ್ಯ ಮತ್ತಿತರರು ಭಾಗಿಯಾಗಿದ್ದರು.
ಕ್ಯಾಂಪಸ್ನಲ್ಲಿ ಹಿಜಾಬ್ ಧರಿಸಬಹುದು, ಕ್ಲಾಸ್, ಲೈಬ್ರೆರಿಗೆ ನೋ ಎಂಟ್ರಿ, ಪ್ರತ್ಯೇಕ ಕೊಠಡಿಯಲ್ಲಿ ಕಳಚಿಟ್ಟು ತರಗತಿಗೆ ಬರಬೇಕು, ಹಿಜಾಬ್ಗೆ ಅವಕಾಶ ಕೊಟ್ಟಿದ್ದರೆ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ವಿದ್ಯಾರ್ಥಿನಿಯರಿಗೆ ಕೌನ್ಸಿಲಿಂಗ್ ಮೂಲಕ ಮನವೊಲಿಕೆ ಮಾಡಬೇಕು ಪದವಿ ಕಾಲೇಜುಗಳಿಗೂ ಹಿಜಾಬ್ ರೂಲ್ಸ್ ಅನ್ವಯಿಸುತ್ತೆ ಎಂದು ಮೀಟಿಂಗ್ ನಂತರ ಉಪಕುಲಪತಿ ಸುಬ್ರಹ್ಮಣ್ಯ ಮಾಹಿತಿ ಕೊಟ್ಟಿದ್ದಾರೆ.
ಇದನ್ನೂ ಓದಿ:ರಾಜ್ಯಕ್ಕೆ ನೂತನ ಮುಖ್ಯಕಾರ್ಯದರ್ಶಿ..! ಜೂನ್ 1ಕ್ಕೆ ವಂದಿತಾ ಶರ್ಮ ಅಧಿಕಾರ ಸ್ವೀಕಾರ..!