ಆ್ಯಂಕರ್ ಅನುಶ್ರೀ. ಈ ಹೆಸರು ಕೇಳಿದ ತಕ್ಷಣ ಎಲ್ಲರು ಓ ನಮ್ಮ ಅನುನಾ ಅಂತಾರೇ.. ಅಷ್ಟರ ಮಟ್ಟಿಗೆ ಕರ್ನಾಟಕದ ಜನರ ಮನಸ್ಸು ಕದ್ದಿದ್ದಾರೆ ಈ ಮಾತಿನ ಮಲ್ಲಿ. ಪಟ್ಟ ಪಟ್ಟ ಅಂತ ಪಟಾಕಿ ತರ ಮಾತಾಡೋ ಅನುಗೆ ಈಗ ಮತ್ತೊಂದು ಕಷ್ಟ ಎದುರಾಗಿದೆ. ಅದು ಹೊರಗಡೆ ಆಗುತ್ತಿರುವ ತೊಂದರೆಯಲ್ಲ ಮನೆಯಲ್ಲೇ ಆಗುತ್ತಿರುವುದು. ಈ ಬಗ್ಗೆ ಸ್ವತಃ ಅವ್ರೆ ಹೇಳಿಕೊಂಡಿದ್ದಾರೆ. ಅಯ್ಯೋ ಪಾಪ ಅನು ಅದೇನ್ ಕಷ್ಟ ಪಡ್ತಿದ್ದಾರೋ, ಅವ್ರ ಅಮ್ಮ ಏನಾದ್ರು ಇದುವೆಯಾಗು ಅನು ಅಂತ ಹೇಳ್ತಿದ್ದಾರ..? ಮನೆ ಕೆಲಸ ಜಾಸ್ತಿ ಆಯ್ತ..? ಏನ್ ಆಯ್ತು ಅಂತ ಯೋಚ್ನೆ ಮಾಡ್ತಿದ್ದೀರ. ಹೇಳ್ತೀವಿ ಮುಂದೆ ಓದಿ..
ಅಂದ್ಹಾಗೇ ಅನುಗೆ ಮನೆಯಲ್ಲಿ ತೊಂದರೆ ಕೊಡ್ತಿರೋದು ಬೇರೆ ಯಾರು ಅಲ್ಲ. ಅವ್ರ ಮುಂದಿನ ನಾಯಿ ಮರಿ. ಹೌದು ಅನುಶ್ರೀ ಮುದ್ದಾದ ನಾಯಿಯನ್ನು ಸಾಕಿದ್ದು, ಅದು ಅವರಿಗೆ ಯಾವಾಗ್ಲೂ ಕೀಟಲೆಯನ್ನು ಮಾಡುತ್ತಿದೆ. ಅನು ಸೂರ್ಯ ನಮಸ್ಕಾರ ಮಾಡಬೇಕಾದ್ರೆ ಅವ್ರ ನಾಯಿ ಅನು ಹಿಂದೆ ಮುಂದೆಯೇ ಓಡಾಡುತ್ತದೆ.. ಹಾಗಿದ್ರು ಕಷ್ಟ ಪಟ್ಟು ಅನುಶ್ರೀ ಸೂರ್ಯ ನಮಸ್ಕಾರ ಮಾಡ್ತಾರೆ.
View this post on Instagram
ಇನ್ನು ಸೂರ್ಯನಮಸ್ಕಾರ ಮಾಡುವಾಗ ಅವ್ರ ಈ ಮುದ್ದಿನ ನಾಯಿ ಮಾಡುತ್ತಿರುವ ತರ್ಲೆಯನ್ನ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡುವ ಮೂಲಕ ಹಂಚಿಕೊಂಡ ಅನುಶ್ರೀ ಅವರು ‘ಮನೇಲಿ ಯೋಗ ಮಾಡೋಣ ಅಂದ್ರೆ.. ನಾನು ಪಡುವ ಅವಸ್ಥೆ ನೋಡಿ ಮಾರಾಯ್ರೆ… ಆದರೂ ನಾನು ಎಷ್ಟು ಸೂರ್ಯನಮಸ್ಕಾರ ಮಾಡಿದ್ದೇನೆ ಹೇಳಿ ನೋಡೋಣ.? ಅಂತ ತಮ್ಮ ಫ್ಯಾನ್ಸ್ಗಳಿಗೆ ಪ್ರಶ್ನೆ ಕೇಳಿದ್ದಾರೆ. ಇನ್ನೂ ಇದಕ್ಕೆ ಹಲವಾರು ಅಭಿಮಾನಿಗಳು ಕಮೆಂಟ್ ಮಾಡಿದ್ದು, ಇವರ ನಾಯಿಯ ತುಂಟಾಟವನ್ನು ಮೆಚ್ಚಿಕೊಂಡಿದ್ದಾರೆ.