ಸ್ಯಾಂಡಲ್ವುಡ್ನ ಯುವರಾಜ ನಿಖಿಲ್ ಕುಮಾರಸ್ವಾಮಿ ಮದ್ವೆ ಬಳಿಕ ಬಣ್ಣದ ದುನಿಯಾದಲ್ಲಿ ಫುಲ್ ಬ್ಯೂಸಿಯಾಗಲಿದ್ದಾರೆ. ಹಾಗಂತ ನಾವ್ ಹೇಳ್ತಿಲ್ಲ ಕಣ್ರೀ, ಯುವರಾಜನ ಕೈಯಲ್ಲಿರೋ ಸಿನಿಮಾಗಳೇ ಇದಕ್ಕೆ ಬೆಸ್ಟ್ ಎಕ್ಸಂಪಲ್. ಇದರ ಜೊತೆಗೆ ನಿಖಿಲ್ ತಮ್ಮ ಅಭಿಮಾನಿಗಳಿಗೆ ಸ್ವೀಟ್ ನ್ಯೂಸ್ವೊಂದನ್ನ ಕೊಟ್ಟಿದ್ದಾರೆ.
ನಿಖಿಲ್ ನಾಯಕನಾಗಿ ನಟಿಸಿದ ಸೀತಾರಾಮ ಕಲ್ಯಾಣ ತೆರೆಗೆ ಅಪ್ಪಳಿಸಿತ್ತು. ಫ್ಯಾಮಿಲಿ ಕಥೆಗೆ ಕಮರ್ಷಿಯಲ್ ಅಂಶಗಳನ್ನು ಸೇರಿಸಿದ್ದ ಪಕ್ಕಾ ಮಾಸ್ ಸಿನಿಮಾ ಇದು. ಒಂದು ಬ್ಯೂಟಿ ಫುಲ್ ಲವ್ ಸ್ಟೋರಿ. ಒಂದಷ್ಟು ಟ್ವಿಸ್ಟ್‌ಗಳು, ಟರ್ನ್‌ಗಳು. ಜೊತೆಗೆ ರೈತರ ಸಂಕಷ್ಟ.. ಫ್ಯಾಮಿಲಿ ಸೆಂಟಿಮೆಂಟ್ ಎಲ್ಲವೂ ಈ ಚಿತ್ರದಲ್ಲಿತ್ತು. ಜಾಗ್ವಾರ್ ಮೂಲಕ ಸ್ಟೈಲಿಶ್ ನಟರಾಗಿದ್ದ ನಿಖಿಲ್ ಇಲ್ಲಿಯೂ ತಮ್ಮ ಸ್ಟೈಲ್ ಮುಂದುವರೆಸಿದ್ರು. ಕಾರ್ಪೋರೇಟ್ ಲುಕ್‌ನಲ್ಲಿಯೇ ನಿಖಿಲ್ ಫೈಟ್ ಮಾಡಿ ಮಾಸ್ ಪ್ರೇಕ್ಷಕರನ್ನು ರಂಜಿಸಿದ್ರು. ಸಿನಿಮಾ ಬಾಕ್ಸಾಫೀಸ್ನಲ್ಲಿ ಹಿಟ್ ಆಯ್ತು.
ನಿಖಿಲ್ ಕುಮಾರಸ್ವಾಮಿ ಮಾಡಿರೋ ಮೂರು ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಬಿಗ್ ಹಿಟ್ ಪಡೆದುಕೊಂಡಿವೆ. ಹೀಗಾಗಿ ಯುವರಾಜನಿಗೆ ಆಫರ್ಗಳು ಅರಸಿ ಬರದೇ ಇರ್ತಾವಾ.? ಖಂಡಿತ ಬಂದೇ ಬರ್ತಾವೆ. ಯಸ್, ಮದ್ವೆ ಬಳಿಕ ನಿಖಿಲ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಲಿದ್ದಾರೆ. ಲಾಕ್ಡೌನ್ ಡೇಸ್ನಲ್ಲಿ ಪತ್ನಿ ಜೊತೆ ಸಮಯ ಕಳೆದಿರೊ ನಿಖಿಲ್, ಲಾಕ್ಡೌನ್ ಎಂಡ್ ಆದ್ಮೇಲೆ ರಾಜಕೀಯದ ಜೊತೆ-ಜೊತೆಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಲಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಬತ್ತಳಿಕೆಯಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ 6 ಪ್ರಾಜೆಕ್ಟ್ಗಳಿವೆ. ಯಸ್, 2020ರಲ್ಲಿ ಯುವರಾಜನ ಕೈಯಲ್ಲಿ ಒಟ್ಟು ಆರು ಸಿನಿಮಾಗಳಿವೆ. ಅಷ್ಟಕ್ಕೂ ರೈಸಿಂಗ್ ಸ್ಟಾರ್ ನಿಖಿಲ್ ಭತ್ತಳಿಕೆಯಲ್ಲಿರೋ ಆ ಆರು ಸಿನಿಮಾಗಳನ್ನ ಒಂದೊಂದಾಗಿ ಹೇಳ್ತೀವಿ ಈ ಸ್ಟೋರಿ ಓದಿ.
ಕುರುಕ್ಷೇತ್ರದಲ್ಲಿ ರೈಸಿಂಗ್ ಸ್ಟಾರ್ ನಿಖಿಲ್ ಅಭಿಮನ್ಯು ಪಾತ್ರದಲ್ಲಿ ಮ್ಯಾಜಿಕ್ ಮಾಡಿದ್ರು. ನಿಖಿಲ್ ಆ್ಯಕ್ಷನ್, ನಟನೆ ಎಲ್ಲವೂ ನಿರ್ಮಾಪಕ ಮುನಿರತ್ನಗೆ ಇಷ್ಟವಾಗಿತ್ತು. ಇದೀಗ ಈ ಜೋಡಿ ಮತ್ತೆ ಒಂದಾಗಿದೆ. ಧನುಷ್ ಐಪಿಎಸ್ ಅನ್ನೋ ಸಿನಿಮಾದ ಮೂಲಕ ಕಮಾಲ್ ಮಾಡೋದಕ್ಕೆ ಮುನಿರತ್ನ ನಿಖಿಲ್ ರೆಡಿಯಾಗಿದ್ದಾರೆ. ಸದ್ಯ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಇಲ್ಲಿ ನಿಖಿಲ್ ಐಪಿಎಸ್ ಅಧಿಕಾರಿಯಾಗಿ ಮಿಂಚಲಿದ್ದಾರೆ. ಆದ್ರೆ ಈ ಚಿತ್ರಕ್ಕೆ ನಿರ್ದೇಶಕರು ಯಾರು ಅನ್ನೋದು ಕನ್ಫರ್ಮ್ ಆಗ್ಬೇಕಿದೆ.
ಮುನಿರತ್ನ ಸಿನಿಮಾದ ಜೊತೆಗೆ ನಿಖಿಲ್ ಕೈಯಲ್ಲಿ ಮತ್ತೊಂದು ಬಿಗ್ ಪ್ರಾಜೆಕ್ಟ್ ಇದೆ. ಕಿಸ್ ನಂತ್ರ ಎಪಿ ಅರ್ಜುನ್ ನಿಖಿಲ್ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.. ಸದ್ಯ ಸಿನಿಮಾಕ್ಕೆ ಪ್ರೊಡಕ್ಷನ್ ನಂಬರ್ ಅಂತಾ ಟೈಟಲ್ ಇಡಲಾಗಿದ್ದು, ಎನ್ಕೆ ಎಂಟರ್ಟ್ರೈನರ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ಅಂದಹಾಗೇ ಈ ಸಿನಿಮಾದಲ್ಲಿ ಮಾಸ್ ಲುಕ್ನಲ್ಲಿ ನಿಖಿಲ್ ಕಾಣಿಸಿಕೊಳ್ಳಲಿದ್ದು, ಇದೊಂದು ನೈಜ ಘಟನೆಯಾಧಾರಿತ ಚಿತ್ರವಾಗಿರಲಿದೆ.
ಇದನ್ನೂ ಓದಿ : ನಿಖಿಲ್ ಕುಮಾರಸ್ವಾಮಿ ಪತ್ನಿ ಜೊತೆ ಭೇಟಿಯಾಗಿದ್ದು ಯಾರನ್ನು ಗೊತ್ತಾ ? ಯುವರಾಜನ ಈ ಫೋಟೋ ಫುಲ್ ವೈರಲ್ !
ನಿಖಿಲ್ ಕುಮಾರಸ್ವಾಮಿ ತೆಲುಗು ಡೈರೆಕ್ಟರ್ ವಿಜಯ್ ಕುಮಾರ್ ಕೊಂಡ ಜೊತೆ ಕೂಡ ಕೈ ಜೋಡಿಸಿದ್ದಾರೆ. ಎನ್.ಕೆ 04 ಪ್ರೊಡಕ್ಷನ್ ಹೆಸ್ರನಲ್ಲಿ ಶುರುವಾಗಿರೋ, ಈ ಆ್ಯಕ್ಷನ್-ಥ್ರಿಲ್ಲರ್ ಸಿನಿಮಾದಲ್ಲಿ, ನಿಖಿಲ್ ರಾ ಲುಕ್ನಲ್ಲಿ ಮಿಂಚಲಿದ್ದಾರೆ. ಇನ್ನು ಈ ಸಿನಿಮಾದ ಫಸ್ಟ್ ಲುಕ್ ಹಾಗೂ ಮೋಷನ್ ಪೋಸ್ಟರ್, ಇದೇ ಸೆಪ್ಟಂಬರ್ 11ಕ್ಕೆ, ಸಖತ್ ಗ್ರ್ಯಾಂಡ್ ಆಗಿ ರಿಲೀಸ್ ಆಗಲಿದೆ. ಅಂದ್ಹಾಗೆ ಈ ಚಿತ್ರಕ್ಕೆ ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ ಸಂಗೀತ ನೀಡಲಿದ್ದಾರೆ.
ಒಟ್ನಲ್ಲಿ ಮದುವೆ ಬಳಿಕ ಯುವರಾಜ ನಿಖಿಲ್ ಕುಮಾರಸ್ವಾಮಿ ರಾಜಕೀಯದ ಜೊತೆಯಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಲಿದ್ದಾರೆ. ಯುವರಾಜನ ಕೈಯಲ್ಲಿರೋ ಈ ಎಲ್ಲಾ ಸಿನಿಮಾಗಳ ಪಟ್ಟಿಯನ್ನ ಒಮ್ಮೆ ನೋಡಿದ್ರೆ 2020ರಲ್ಲಿ ನಿಖಿಲ್ ಮತ್ತೊಮ್ಮೆ ತೆರೆಮೇಲೆ ಮ್ಯಾಜಿಕ್ ಮಾಡೋದು ಪಕ್ಕಾ ಅಂತಿದ್ದಾರೆ ಸಿನಿ ಪಂಡಿತರು.