ವೆಲ್ಲಿಂಗ್ಟನ್ : ನ್ಯೂಜಿಲೆಂಡ್ ಪ್ರಧಾನಿ ಲೇಬರ್ ಪಾರ್ಟಿಯ ಜಸಿಂಡಾ ಅರ್ಡೆರ್ನ್ ದಿಢೀರ್ ರಾಜೀನಾಮೆ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ. ದೊಡ್ಡ ಜವಾಬ್ದಾರಿ ಇರುವ ಉನ್ನತ ಹುದ್ದೆಯನ್ನು ನಿರ್ವಹಿಸಲು ನನಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಪ್ರಧಾನಿ ಸ್ಥಾನ ತ್ಯಜಿಸಲು ಇದು ಸೂಕ್ತ ಸಮಯ ಎಂದು ಹೇಳಿದ್ದಾರೆ.
ನನಗೆ ಪ್ರಧಾನಿ ಹುದ್ದೆ ನಿಭಾಯಿಸಲು, ಪದವಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದು 42 ವರ್ಷದ ಜಸಿಂಡಾ ಹೇಳಿದ್ದಾರೆ. ಫೆಬ್ರವರಿಗೂ ಮುನ್ನ ಸ್ಥಾನ ತೊರೆಯುತ್ತಿರುವೆ. ಮತ್ತೊಂದು ಎಲೆಕ್ಷನ್ಗೆ ನಿಲ್ಲಲ್ಲ ಎಂದು ಹೇಳಿದ್ದಾರೆ. ಕಳೆದ ಐದೂವರೆ ವರ್ಷದಿಂದ ಆರ್ಡೆರ್ನ್ ಪ್ರಧಾನಿ ಹುದ್ದೆಯಲ್ಲಿದ್ದರು.
ಇದನ್ನೂ ಓದಿ : ನಮೋ ಕಲಬುರಗಿ ಕಾರ್ಯಕ್ರಮಕ್ಕೆ ಮೈಸೂರು ಪಾಕ್… ಬೆಳ್ಳಂಬೆಳಗ್ಗೆ ರೆಡಿಯಾಗ್ತಿದೆ ಗರ್ಮಾ ಗರಂ ವೆರೈಟಿ ಊಟ…