ಪಣಜಿ: ಇಡೀ ದೇಶಕ್ಕೆ ಕಂಟಕ ಆಗುತ್ತಾ ಗೋವಾದಲ್ಲಿ ಆಚರಿಸಿದ್ದ ನ್ಯೂ ಇಯರ್ ನೈಟ್ ಪಾರ್ಟಿ. ನ್ಯೂ ಇಯರ್ ಪಾರ್ಟಿ ಮಾಡಲು ಕಾರ್ಡಿಲಿಯಾ ಕ್ರ್ಯೂಸ್ ಎಂಪ್ರೆಸ್ನಲ್ಲಿ 2000 ಮಂದಿ ಬಂದಿಳಿದಿದ್ದರು, ಆ ಹಡಗಿನಲ್ಲಿದ್ದ ಕೆಲವರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.
ಗೋವಾದಲ್ಲಿ ಕಳೆದ ರಾತ್ರಿ ಪ್ರಯಾಣಿಕರಿಗೆ ಆರ್ಟಿಪಿಸಿಆರ್ ಟೆಸ್ಟ್ ಮಾಡಿಸಲಾಗಿದ್ದು, ಹಡಗಿನಲ್ಲಿದ್ದ ಕೆಲವರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಎಲ್ಲರನ್ನೂ ಖಾಸಗಿ ಆಸ್ಪತ್ರೆಯಲ್ಲಿ ಐಸೊಲೇಷನ್ ಮಾಡಲಾಗಿದೆ. 2000 ಮಂದಿ ಕಾರ್ಡಿಲಿಯಾ ಕ್ರ್ಯೂಸ್ ಎಂಪ್ರೆಸ್ನಲ್ಲಿ ಬಂದಿದ್ದರು. ಕರ್ನಾಟಕದವರೂ ಗೋವಾಗೆ ಹೋಗಿದ್ದರಾ? ಯಾವ ಯಾವ ರಾಜ್ಯದಿಂದ ಗೋವಾಗೆ 2000 ಮಂದಿ ಹೋಗಿದ್ದರು ಎಂಬುದು ಆತಂಕವನ್ನು ಸೃಷ್ಟಿಸಿದೆ.
ಇದನ್ನೂ ಓದಿ : ಕರಿಬಸವೇಶ್ವರ ಮಠದ ಆನೆಗೆ ಚಿಕಿತ್ಸೆ ಕೊಡಿಸೋ ನೆಪದಲ್ಲಿ ಕಿಡ್ನಾಪ್… ಗುಜರಾತಿನ ಸರ್ಕಸ್ ಕಂಪನಿಗೆ ಮಾರಾಟಕ್ಕೆ ಯತ್ನ…