ಮೈಸೂರು : ಸಿದ್ದರಾಮಯ್ಯ ಸಿದ್ದರಾಮೇಶ್ವರ ದೇವರ ದರ್ಶನ ಪಡೆದು, ಹಣೆಗೆ ಕುಂಕುಮ ಗಂಧದ ಬೊಟ್ಟನ್ನು ಹಾಕಿಸಿಕೊಂಡರು.
ಸಿದ್ದರಾಮನಹುಂಡಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ,ನಮ್ಮೂರು ಆದ ಕಾರಣ ಹೆಚ್ಚು ಭಾಷಣ ಮಾಡುವುದಿಲ್ಲ, ಚಿಕ್ಕವಯಸ್ಸಿನಿಂದ ಎಲ್ಲರೂ ನೋಡಿದ್ದೀರಾ. ಶಾಸಕನಾಗಿ ತಾಲೂಕು ಬೋರ್ಡ್ ಸದಸ್ಯನಾಗಿ ಕೆಲಸ ಮಾಡಿದ್ದೇನೆ. ಸಿದ್ದರಾಮನಹುಂಡಿ ಗ್ರಾಮದಲ್ಲಿ ನೂತನ ಹಾಲು ಉತ್ಪಾದಕ ಘಟಕ ಆರಂಭವಾಗಿದೆ. ಎಲ್ಲರೂ ಸೇರಿ ಉದ್ಘಾಟನೆ ಮಾಡಿದ್ದೇವೆ. ಅತ್ಯಂತ ಸಂತೋಷದಿಂದ ಈ ಕಟ್ಟಡ ಉದ್ಘಾಟನೆ ಮಾಡಿದ್ದೇನೆ. ನಾನು ಎರಡೂವರೆ ವರ್ಷಗಳ ಕಾಲ ಪಶು ಸಂಗೋಪನೆ ಸಚಿವನಾಗಿದ್ದೆ. ಮೊದಲು ಡೈರಿ ಮತ್ತು ಯೂನಿಯನ್ ಗಳು ಬೇರೆ ಇತ್ತು.
ವರುಣಾ ಕ್ಷೇತ್ರದಲ್ಲಿ ಮಗನ ಕೆಲಸಕ್ಕೆ ಅಪ್ಪ ಶಬ್ಬಾಶ್ ಹೇಳಿದ್ದಾರೆ. ಯತೀಂದ್ರ ಬಹಳ ಒಳ್ಳೆಯ ಅಭಿವೃದ್ಧಿ ಮಾಡಿದ್ದಾನೆ. ನಮ್ಮ ಸರ್ಕಾರ ಇಲ್ಲದಿದ್ದರು, ಸರ್ಕಾರ ಕೇಳಿದಷ್ಟು ಅನುದಾನ ಕೊಡದೆ ಇದ್ದರು. ಇರುವ ಅನುದಾನದಲ್ಲಿ ಯತೀಂದ್ರ ಹಲವು ಕೆಲಸ ಮಾಡಿದ್ದಾರೆ. ಯತೀಂದ್ರ ಬಗ್ಗೆ ಜನರಿಗೆ ಬಹಳ ಒಳ್ಳೆಯ ಅಭಿಪ್ರಾಯವಿದೆ. ಕ್ಷೇತ್ರದಲ್ಲಿ ಸುತ್ತಾಡಿ ಬಹಳ ವರ್ಷವಾಗಿತ್ತು. ಜನರ ರೆಸ್ಪಾನ್ಸ್ ಉತ್ತಮವಾಗಿದೆ. ಇದನ್ನು ಕಂಡು ಸಹಜವಾಗಿಯೆ ಖುಷಿಯಾಗುತ್ತೆ. ವರುಣಾ ಮಾತ್ರವಲ್ಲದೆ ಬೇರೆ ಕ್ಷೇತ್ರದಲ್ಲೂ ಜನ ನಿಲ್ಲುವಂತೆ ಹೇಳುತ್ತಿದ್ದಾರೆ.
ವರುಣಾ ಕ್ಷೇತ್ರದ ಹೋದ ಕಡೆಯಲ್ಲೆಲ್ಲ ಇಲ್ಲೇ ಸ್ಪರ್ಧೆ ಮಾಡಿ ಅಂತ ಕರೆದ್ರು. ಆದ್ರೆ ನಾನು ಎಲ್ಲಾ ನಿರ್ಧಾರವನ್ನ ಹೈಕಮಾಂಡ್ ಗೆ ಬಿಟ್ಟಿದ್ದೇನೆ. ಡೈರಿಗೆ ಹಾಲು ಹಾಕುವ ರೈತರಿಗೆ ಐದು ರೂ ಪ್ರೋತ್ಸಾಹ ಧನ ಮಾಡಿದ್ದು ನಾನು ಎಂದು ಸಿದ್ದರಾಮಯ್ಯ ಹೇಳಿದರು. ಆ ಸಂದರ್ಭ ಡೈರಿ ನಿರ್ದೇಶಕ ನೀವಲ್ಲ ಯಡಿಯೂರಪ್ಪ ಎಂದು ಹೇಳಿದ್ದಾರೆ. ಈ ವೇಳೆ ಯಡಿಯೂರಪ್ಪ ಅಲ್ಲ ನಾನು ಐದು ರೂ ಪ್ರೋತ್ಸಾಹ ಧನ ಕೊಟ್ಟಿದ್ದು ಎಂದು ಟಾಂಗ್ ಕೊಟ್ಟು, ಮತ್ತೆ ಯಡಿಯೂರಪ್ಪ ಅಲ್ಲ ಪ್ರೋತ್ಸಾಹ ಧನ ಕೊಟ್ಟಿದ್ದು ನಾನು ಎಂದು ಒತ್ತಿ ಹೇಳಿದ್ದಾರೆ.
ಇದನ್ನೂ ಓದಿ : ಹಳೆ ಪ್ರೇಮಿಯ ವಿಕೃತಿ ರಿವೀಲ್ ಮಾಡಿದ ನಟಿ ಫ್ಲೋರಾ ಸೈನಿ…ಅಲರ್ಟ್ ಆಗದೇ ಇದ್ರೆ ಶ್ರದ್ಧಾ ಸ್ಥಿತಿ ಬರ್ತಿತ್ತಾ..?