ಬೆಂಗಳೂರು: ದಕ್ಷಿಣ ಆಫ್ರಿಕಾ ನಂತರ ಆಸ್ಟ್ರೇಲಿಯಾದಲ್ಲೂ ಓಮಿಕ್ರಾನ್ ಕಾಟ ಶುರುವಾಗಿದ್ದು, ಸಿಡ್ನಿಯ ಇಬ್ಬರು ಪ್ರಯಾಣಿಕರಲ್ಲಿ ಹೊಸ ಸೋಂಕು ಕಾಣಿಸಿಕೊಂಡಿದೆ.
ದಕ್ಷಿಣ ಆಫ್ರಿಕಾದಿಂದ ಬಂದಿದ್ದ ಇಬ್ಬರಲ್ಲಿ ಸೋಂಕು ಪತ್ತೆಯಾಗ್ತಿದ್ದಂತೆ ಆಸ್ಟ್ರೇಲಿಯಾ ಆತಂಕಕ್ಕೆ ಒಳಗಾಗಿದ್ದು, ನ್ಯೂ ಸೌತ್ವೇಲ್ಸ್ ಜೆನೋಮ್ ಸೆಂಟರ್ನಲ್ಲಿ ಗಂಟಲು ದ್ರವ ಪರೀಕ್ಷೆ ಮಾಡಲಾಗಿದೆ. ಗಂಟಲು ದ್ರವ ಪರೀಕ್ಷೆಯಲ್ಲಿ ಓಮಿಕ್ರಾನ್ ರೂಪಾಂತರಿ ವೈರಸ್ ಪತ್ತೆಯಾಗಿದೆ. ಬ್ರೆಜಿಲ್, ಕೆನಡಾ, ಜಪಾನ್, ನ್ಯೂಜಿಲೆಂಡ್, ಥಾಯ್ಲೆಂಡ್, ಅಮೆರಿಕ, ಇಸ್ರೇಲ್ ಸೇರಿ ಹಲವೆಡೆ ಸೋಂಕು ಹೆಚ್ಚಳವಾಗುತ್ತಿದ್ದು, ಸೋಂಕಿತರಲ್ಲಿ ಓಮಿಕ್ರಾನ್ ಹೊಸ ತಳಿ ಇರೋ ಬಗ್ಗೆ ಪರೀಕ್ಷೆ ನಡೆಸಲಾಗುತ್ತಿದೆ.
ಇದನ್ನೂ ಓದಿ:ರಾಜ್ಯಕ್ಕೆ ಇನ್ನೂ ಕೊರೊನಾ ಹೊಸ ತಳಿ ಬಂದಿಲ್ಲ… ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿಕೆ…!