ಚಂಡೀಗಢ: ಪಂಜಾಬ್ನ ನೂತನ ಮುಖ್ಯಮಂತ್ರಿಯ ಪ್ರಮಾಣ ವಚನ ಕಾರ್ಯಕ್ರಮ ಮಾರ್ಚ್ 16ರಂದು ನಡೆಯಲಿದೆ. ಆಮ್ ಆದ್ಮಿ ಪಕ್ಷದ ಟೀಂ ರೆಡಿಯಾಗಿದ್ದು ಭಗವಂತ್ ಮಾನ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಅಂದು ಮಧ್ಯಾಹ್ನ 12.30 ಕ್ಕೆ ಭಗತ್ ಸಿಂಗ್ ಹುಟ್ಟೂರು ಖಾತ್ಕರ್ ಕಲಾನ್ನಲ್ಲಿ ಪ್ರಮಾಣವಚನ ಸಮಾರಂಭ ಜರುಗಲಿದೆ ಎಂದು ಭಾವಿ ಸಿಎಂ ಭಗವಂತ್ ಮಾನ್ ತಿಳಿಸಿದ್ದಾರೆ. ಇವತ್ತು ಬೆಳಗ್ಗೆ ತಮ್ಮ ಬೆಂಬಲಿತ ಶಾಸಕರ ಪ್ರಮಾಣ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಕೆ ಮಾಡಿ ಸರ್ಕಾರ ರಚನೆಗೆ ಮಾನ್ ಅನುಮತಿ ಕೇಳಿದ್ದಾರೆ.
ਨਵੇਂ ਚੁਣੇ ਗਏ 'ਆਪ' ਦੇ ਵਿਧਾਇਕਾਂ ਨਾਲ ਮੁਹਾਲੀ ਵਿਖੇ ਪਹਿਲੀ ਬੈਠਕ https://t.co/oU0JKkcNsx
— Bhagwant Mann (@BhagwantMann) March 11, 2022