ನೆಲಮಂಗಲ: ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನೆಲಮಂಗಲ ತಾಲೂಕಿನ ದಾಬಸ್ ಪೇಟೆಯಲ್ಲಿ ನೂತನವಾಗಿ ನಿರ್ಮಾಣವಾದ ವಿ ಕೇರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಿದ್ದಾರೆ.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸ್ವಾಮೀಜಿ ದಾಬಸ್ ಪೇಟೆ ಭಾಗದಲ್ಲಿ ಜನಸಂಖ್ಯೆ ಹೆಚ್ಚಾದಂತೆ ಅನಾರೋಗ್ಯ ಸಮಸ್ಯೆ ಕೂಡ ಹೆಚ್ಚಾಗುತ್ತಿದೆ, ಕೊರೊನ ಸಮಯದಲ್ಲಿ ಉದ್ಘಾಟನೆಯಾಗಿರುವ ಈ ಆಸ್ಪತ್ರೆ ನಾಡಿನ ಜನರ ಸೇವೆಯನ್ನ ಮಾಡಲಿ, ಈ ದೇಶದ ಸಂಪತ್ತು ಮಾನವ ಸಂಪತ್ತು, ಮಾನವ ಸಂಪನ್ಮೂಲ ಮಾನಸಿಕವಾಗಿ ಹಾಗೂ ದೈಹಿಕವಾಗಿ ಆರೋಗ್ಯವಾಗಿದ್ರೆ ದೇಶವು ಕೂಡ ಚೆನ್ನಾಗಿರುತ್ತೆ. ಆ ದೇಹಕ್ಕೆ ಆರೋಗ್ಯ ತಪ್ಪಿದಲ್ಲಿ ಉತ್ತಮ ಆಸ್ಪತ್ರೆಯ ಅವಶ್ಯಕತೆ ಇರುತ್ತದೆ ಈ ನಿಟ್ಟಿನಲ್ಲಿ ಈ ಆಸ್ಪತ್ರೆ ಉತ್ತಮ ಕೆಲಸ ನಿರ್ವಹಿಸಲಿ ಎಂದು ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದ್ದಾರೆ.
ಇದೇ ವೇಳೆ ಆಸ್ಪತ್ರೆ ನಿರ್ದೇಶಕ ಡಾ.ಸೀತಾರಾಮಯ್ಯ ಮಾತನಾಡಿ ಡಾಬಸ್ ಪೇಟೆ ಅತ್ಯುತ್ತಮ ಆಸ್ಪತ್ರೆಯನ್ನ ನಮ್ಮ ಸ್ನೇಹಿತರು ಬಡವರ ಆರೋಗ್ಯದ ದೃಷ್ಟಿಯಿಂದ ಉತ್ತಮ ಸೇವೆ ನೀಡಲು ಅತ್ಯಾಧುನಿಕ ತಂತ್ರಜ್ಞಾನದ ಉಪಕರಣಗಳನ್ನೊಳಗೊಂಡ ಸುಸಜ್ಜಿತ ಆಸ್ಪತ್ರೆಯನ್ನ ಇಂದು ಪೂಜ್ಯರು ಹಾಗೂ ಗಣ್ಯರ ಸಮ್ಮುಖದಲ್ಲಿ ಉದ್ಘಾಟನೆಯಾಗಿದೆ. ಇನ್ನು ಈ ಕಾರ್ಯಕ್ರಮದಲ್ಲಿ ಸಿದ್ದಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರು ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೆಲಮಂಗಲ ಶಾಸಕ ಡಾ.ಶ್ರೀನಿವಾಸ್ ಮೂರ್ತಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಸ್ಥಳ: ನೆಲಮಂಗಲ
ವರದಿ: ಮಂಜುನಾಥ್ .ಜಿ
ಇದನ್ನೂ ಓದಿ:#FlashNews ಯಾವುದೇ ಸಮುದಾಯ, ಧರ್ಮಕ್ಕೆ ನೋವು ಮಾಡಿದ್ರೆ ಒಳ್ಳೆಯದಾಗಲ್ಲ: ಶೋಭಾ ಕರಂದ್ಲಾಜೆ