ನೆಲಮಂಗಲ : ನೆಲಮಂಗಲದಲ್ಲಿ ನಿರಂತರ ಮಳೆಗೆ ಹಲವು ಅವಾಂತರಗಳು ಸೃಷ್ಟಿಯಾಗಿದ್ದು, ತಾಲೂಕಿನ ಡಾಬಸ್ ಪೇಟೆ, ತ್ಯಾಮಗೊಂಡ್ಲು ಭಾಗದಲ್ಲಿ ವರುಣನ ಆರ್ಭಟಕ್ಕೆ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ನದಿಯಂತಾಗಿತ್ತು. ಬಿರುಗಾಳಿಗೆ ನೂರಾರು ಮರಗಳು, 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿ ಕೆಲ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಇನ್ನು ಗಡಿಯ ದೇವರಕೆರೆ ಭರ್ತಿಯಾಗಿ ಕೆರೆಯಿಂದ ನೀರು ಜಲಪಾತದಂತೆ ಹರಿಯುತ್ತಿದೆ.
ಇನ್ನೂ ರಾಯಚೂರಿನಲ್ಲೂ ಭಾರೀ ಮಳೆ ಆಗಿದ್ದು, ರಾಯಚೂರು-ಯಾದಗಿರಿ ಮುಖ್ಯ ಹೆದ್ದಾರಿ ಅಂಡರ್ ಪಾಸ್ ಜಲಾವೃತವಾಗಿದೆ. ಗುಡುಗು, ಮಿಂಚು ಸಹಿತ ಮಳೆ ಆಗಿದ್ದು, ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತವಾಗಿದ್ದವು.
ಇದನ್ನೂ ಓದಿ : SSLC ಪರೀಕ್ಷೆ ಫಲಿತಾಂಶಕ್ಕೆ ಕೌಂಟ್ಡೌನ್..! ಇಂದು ಮಧ್ಯಾಹ್ನ 12.30ಕ್ಕೆ ರಿಸಲ್ಟ್ ಅನೌನ್ಸ್..!