ಬೆಂಗಳೂರು : ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಮೇಲೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದು, ಚಕ್ರತೀರ್ಥ ನೇಮಿಸಿದ ಬಿಜೆಪಿಗೆ ಮಾನ ಮರ್ಯಾದೆ ಇಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಸಿದ್ದರಾಮಯ್ಯ 2017ರಲ್ಲಿ ಚಕ್ರತೀರ್ಥ ಮಾಡಿದ್ದಾರೆನ್ನಲಾದ ಟ್ವೀಟ್ ಉಲ್ಲೇಖಿಸಿ ನಾಡಗೀತೆಯನ್ನೇ ಈತ ಅವಹೇಳನ ಮಾಡಿದ, ರಾಷ್ಟ್ರ ಕವಿಯನ್ನು ಗೇಲಿ ಮಾಡಿದ ಕಿಡಿಗೇಡಿ ಈತ. ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಗೆ ಈತನನ್ನು ಅಧ್ಯಕ್ಷನನ್ನಾಗಿ ಮಾಡಿದ್ದಾರೆ. ಸರ್ಕಾರಕ್ಕೆ ಮಾನ-ಮರ್ಯಾದೆ ಇದ್ದರೆ ಈತನನ್ನು ಕಿತ್ತುಹಾಕಬೇಕು ಎಂದು ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.
ನಾಡಗೀತೆಯನ್ನು ಅವಹೇಳನ ಮಾಡಿದ, ರಾಷ್ಟ್ರಕವಿಯನ್ನು
ಗೇಲಿ ಮಾಡಿದ
ಇಂತಹ ಒಬ್ಬ ಕಿಡಿಗೇಡಿಯನ್ನು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡಿದ @BJP4Karnataka ಸರ್ಕಾರಕ್ಕೆ ಮಾನ-ಮರ್ಯಾದೆ ಏನಾದರೂ ಇದ್ದರೆ ಮೊದಲು ಈತನನ್ನು ಕಿತ್ತುಹಾಕಬೇಕು. pic.twitter.com/RLGLIOhTLm— Siddaramaiah (@siddaramaiah)
ಇದನ್ನೂ ಓದಿ : ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಬಾವ ಡಾ. ಬಿ ಯಶೋವರ್ಮ ವಿಧಿವಶ…!