ಮೈಸೂರು :ಮೈಸೂರಿಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗಾಗಿ ಮೈಸೂರು ರಾಜಮನೆತನದದಿಂದ ವಿಶೇಷ ಪೇಟ ಸಿದ್ಧವಾಗಿದೆ. ಮೈಸೂರು ಮಹಾರಾಜರಂತೆ ಕೆಂಪು ಪೇಟೆ ತೊಡಿಸಲು ತಯಾರಿ ಮಾಡಿಕೊಳ್ಳಲಾಗಿದೆ. ಮೋದಿಯ ತಲೆಯ ಮೇಲೆ ಇಂದು ಮೀರ ಮೀರ ಆಕರ್ಷಕ ಪೇಟ ರಾರಾಜಿಸುತ್ತದೆ.
ಮೈಸೂರಿನ ಕಲಾವಿದ ನಂದನ್ ಮೋದಿಗಾಗಿ ಆಕರ್ಷಕ ಪೇಟ ಸಿದ್ದಪಡಿಸಿದ್ದಾರೆ. ಮೈಸೂರು ಪೇಟ ರೇಷ್ಮೇ ನೂಲಗಳಿಂದ ಸಿದ್ದಪಡಿಸಿದ್ದಾರೆ. ಕೆಂಪು ಹಾಗೂ ಗೋಲ್ಡ್ ಕಲರ್ ಮೈಸೂರು ಸಾಂಪ್ರದಾಯಿಕ ಶೈಲಿಯ ಪೇಟವಾಗಿದೆ. ಇಂದು ಸಂಜೆ ಮಹಾರಾಜ ಕಾಲೇಜು ಮೈದಾನದಲ್ಲಿ ಮೋದಿಗೆ ಮೈಸೂರು ಪೇಟ ತೊಡಿಸಲಾಗುತ್ತದೆ.
ಇದನ್ನೂ ಓದಿ : ಬೆಂಗಳೂರಿಗೆ ಪ್ರಧಾನಿ ಮೋದಿ ಎಂಟ್ರಿ…! ನಮೋ ಸ್ವಾಗತಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್…!