ಬೆಂಗಳೂರು : ಫೆಬ್ರವರಿಯಲ್ಲಿ ಮೂರು ಬಾರಿ ರಾಜ್ಯಕ್ಕೆ ಬರ್ತಾರಾ ಮೋದಿ..? ಪ್ರಧಾನಿ ಮೋದಿ ಫೆಬ್ರವರಿ 13 ಮತ್ತು ಫೆಬ್ರವರಿ 27ಕ್ಕೆ ಭೇಟಿ ನೀಡಲಿದ್ದಾರೆ. ನಮೋ ಫೆಬ್ರವರಿ 13ರಂದು ಬೆಂಗಳೂರು, ತುಮಕೂರಿಗೆ ಆಗಮಿಸಲಿದ್ದಾರೆ.
ನಮೋ ಬೆಂಗಳೂರು ಏರ್ಶೋ ಉದ್ಘಾಟನೆಗೆ ಬರುತ್ತಿದ್ದಾರೆ. ಏರ್ಶೋ ಉದ್ಘಾಟನೆಗೆ ಬಂದಾಗ ಬೃಹತ್ ರೋಡ್ ಶೋ ಪ್ಲಾನ್ ಮಾಡಿದ್ದು, ಹುಬ್ಬಳ್ಳಿ ಮಾದರಿಯಲ್ಲೇ ಬೆಂಗಳೂರಲ್ಲೂ ರೋಡ್ ಶೋ ಪ್ಲಾನ್ ಮಾಡಲಾಗಿದೆ. ನಾಲ್ಕೈದು ಕ್ಷೇತ್ರಗಳನ್ನು ಟಾರ್ಗೆಟ್ ಮಾಡಿ ನಮೋ ರೋಡ್ ಶೋ ನಡೆಸಲಾಗುತ್ತದೆ. ಫೆಬ್ರವರಿ 13ರಂದು ತುಮಕೂರಿನ ಗುಬ್ಬಿ ಬಳಿ ಉದ್ಘಾಟನೆ ನಡೆಸಲಾಗುತ್ತದೆ. ಮತ್ತೆ ಫೆಬ್ರವರಿ 27ರಂದು ಶಿವಮೊಗ್ಗಕ್ಕೆ ಪ್ರಧಾನಿ ಭೇಟಿ ನೀಡಲಿದ್ದಾರೆ . BSY ಹುಟ್ಟುಹಬ್ಬದ ದಿನವೇ ಏರ್ಪೋರ್ಟ್ ಉದ್ಘಾಟನೆ ನಡೆಸಲಾಗುತ್ತದೆ. ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಬಿಜೆಪಿ ಹವಾ ಸೃಷ್ಟಿಗೆ ಭೇಟಿ ನೀಡಲಿದ್ದು, ನಮೋ ಎಲೆಕ್ಷನ್ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಸರಣಿ ಭೇಟಿ ಕೊಡುತ್ತಿದ್ದಾರೆ.
ಇದನ್ನೂ ಓದಿ : ಸಾರಿಗೆ ಇಲಾಖೆಯಿಂದ ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ..! ಬೆಂಗಳೂರಿಗೆ ಹೊಸ ಬಸ್.. ಬೆಳಗಾವಿ, ಹುಬ್ಬಳ್ಳಿಗೆ ಗುಜರಿ ಬಸ್..!