ಉಡುಪಿ: ಅರ್ಕಾವತಿ ಹಗರಣವನ್ನು ನಾವು ಬಯಲು ಮಾಡುತ್ತೇವೆ, ಈ ಹಗರಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಶಾಶ್ವತವಾಗಿ ಜೈಲಿನಲ್ಲಿ ಇರುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಉಡುಪಿಯಲ್ಲಿ ರಾಜ್ಯ ಪದಾಧಿಕಾರಿಗಳ ಸಭೆ ಉದ್ಘಾಟಿಸಿ ಮಾತನಾಡಿದ ಕಟೀಲ್ ಅವರು ‘ಭ್ರಷ್ಟಾಚಾರ, ಭಯೋತ್ಪಾದನೆ ಮತ್ತು ಪರಿವಾರ ವಾದ ಇವು ಈ ದೇಶಕ್ಕೆ ಕಾಂಗ್ರೆಸ್ನ ಕೊಡುಗೆ. ಕಾಂಗ್ರೆಸ್ ನ ಪ್ರತಿಯೊಬ್ಬ ಪ್ರಧಾನಿಯೂ ಹಗರಣಗಳ ಸರಮಾಲೆ ಕೊಟ್ಟಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಅವರ ಕಾಲದಲ್ಲಿ ಒಂದೇ ಒಂದು ಹಗರಣ ನಡೆದಿರಲಿಲ್ಲ. ನರೇಂದ್ರ ಮೋದಿ ಸರ್ಕಾರದಲ್ಲಿ ಹಗರಣಗಳೇ ಇಲ್ಲ’ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: 9 ಗಂಟೆ ಕಾಲ ಸತ್ತು ಬದುಕ್ತಾನೆ ಮನುಷ್ಯ… ಚಾಮರಾಜನಗರದಲ್ಲಿ 19 ವರ್ಷಗಳಿಗೊಮ್ಮೆ ನಡೆಯುತ್ತೆ ಈ ವಿಚಿತ್ರ ಹಬ್ಬ…
ಇನ್ನು ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರು ಕಾಂಗ್ರೆಸ್, ಅರ್ಕಾವತಿ ಹಗರಣ ಬಯಲು ಮಾಡಿಯೇ ಮಾಡುತ್ತೇವೆ. ಈ ಹಗರಣದಲ್ಲಿ ಸಿದ್ದರಾಮಯ್ಯ ಶಾಶ್ವತವಾಗಿ ಜೈಲಿನಲ್ಲಿ ಇರುತ್ತಾರೆ. ಕಾಂಗ್ರೆಸ್ ನ ಎಲ್ಲಾ ನಾಯಕರೂ ಜಾಮೀನಿನ ಮೇಲೆ ಹೊರಗಿದ್ದಾರೆ ಎಂದು ನಳಿನ್ ಕುಮಾರ್ ಕಟೀಲ್ ಲೇವಡಿ ಮಾಡಿದರು.
ಉಡುಪಿಯಲ್ಲಿ ಆರಂಭವಾದ ಹಿಜಾಬ್ ವಿವಾದ ದೇಶಾದ್ಯಂತ ಚರ್ಚೆಗೆ ಕಾರಣವಾಯಿತು. ಇಂತಹ ಹಲವಾರು ಶಾಂತಿ ಭಂಗದ ಘಟನೆಗಳು ನಡೆದಿವೆ. ಬಿಜೆಇ ಸರ್ಕಾರ ಇಂತಹ ಎಲ್ಲಾ ದುಷ್ಟ ಶಕ್ತಿಗಳನ್ನು ನಿಗ್ರಹ ಮಾಡುತ್ತದೆ. ಇಂತಹ ವಿಚಾರಗಳನ್ನು ನಿಯಂತ್ರಣ ಮಾಡುವ ಶಕ್ತಿ ನಮಗೆ ಇದೆ. ಹಿಜಾಬ್, ಆಜಾನ್, ಹಲಾಲ್ ವಿಚಾರಗಳಲ್ಲಿ ನಮ್ಮ ಪಕ್ಷ ಸ್ಪಷ್ಟವಾದ ಸಂದೇಶ ಕೊಡುತ್ತದೆ. ಏಕ ಭಾರತ, ಶ್ರೇಷ್ಠ ಭಾರತ ಎಂಬ ಕಲ್ಪನೆಯಲ್ಲಿ ಸಂವಿಧಾನದ ರಕ್ಷಣೆ ಮಾಡುತ್ತೇವೆ. ಬಿಜೆಪಿಯಲ್ಲಿ ತುಷ್ಠೀಕರಣ ನೀತಿ ಇಲ್ಲ ಎಂದು ಕಟೀಲ್ ತಿಳಿಸಿದ್ಧಾರೆ.
ಇದನ್ನೂ ಓದಿ: ಬಿ.ಕೆ ಹರಿ ಪ್ರಸಾದ್ ಅವ್ರೇ.. ಹಿಂದೂ ಕಾರ್ಯಕರ್ತರನ್ನ ಟೆರೆರಿಸ್ಟ್ ಅನ್ನೋಕೆ ನಾಚಿಕೆಯಾಗಲ್ವಾ..? ಪ್ರಶಾಂತ್ ಸಂಬರಗಿ..