ಮೈಸೂರು: ಕೊಮ್ಮಘಟ್ಟದಿಂದ ನೇರ ಮೈಸೂರಿಗೆ ಪ್ರಧಾನಿ ಭೇಟಿ ಕೊಡಲಿದ್ದು, ಸಂಜೆ 4 ಗಂಟೆಗೆ ಮೈಸೂರಿಗೆ ಹೊರಡಲಿದ್ದಾರೆ.
ನಮೋ ವಿಶೇಷ ಹೆಲಿಕಾಪ್ಟರ್ ಮೂಲಕ ಮೈಸೂರಿಗೆ ತೆರಳಲಿದ್ದು, ಅರಮನೆ ಬಳಿಯ ಹೆಲಿಪ್ಯಾಡ್ಗೆ ಬಂದಿಳಿಯಲಿದ್ದಾರೆ. ರಸ್ತೆ ಮಾರ್ಗವಾಗಿ ಮೋದಿ ಮಹಾರಾಜ ಕಾಲೇಜಿಗೆ ತೆರಳಲಿದ್ದು, ಸಂಜೆ 5 ಗಂಟೆಯಿಂದ 6:15ರವರೆಗೆ ಸಾರ್ವಜನಿಕ ಕಾರ್ಯಕ್ರಮ ನಡೆಯಲಿದೆ. ವಿವಿಧ ಯೋಜನೆ ಫಲಾನುಭವಿಗಳ ಜೊತೆ ಪ್ರಧಾನಿ ಚರ್ಚೆ ಮಾಡಲಿದ್ದು,
ಸಂಜೆ 6.30ಕ್ಕೆ ರಸ್ತೆ ಮೂಲಕ ಹೊರಟು ಸುತ್ತೂರು ಮಠದ ಶ್ರೀಗಳ ಭೇಟಿಯಾಗಲಿದ್ದಾರೆ. ಮಠದ ವೇಧ ಪಾಠಶಾಲೆಯ ಕಟ್ಟಡಕ್ಕೆ ಭೇಟಿ ನೀಡಿ ನಮೋ ವೀಕ್ಷಿಸಲಿದ್ದು, ಸುತ್ತೂರು ಮಠದಿಂದ ಹೊರಟು 7:30ಕ್ಕೆ ಚಾಮುಂಡಿಬೆಟ್ಟಕ್ಕೆ ಭೇಟಿ ಕೊಡಲಿದ್ದಾರೆ.
ಪ್ರಧಾನಿ ಮೋದಿ ತಾಯಿ ಚಾಮುಂಡಿಯ ದರ್ಶನ ಪಡೆಯಲಿದ್ದು, 7.30ರಿಂದ 07.45ರವರೆಗೆ ಚಾಮುಂಡಿಗೆ ಪೂಜೆ ಸಲ್ಲಿಸಲಿದ್ದಾರೆ. ನಾಳೆ ಮೈಸೂರಿನಲ್ಲಿ ವಿಶ್ವ ಯೋಗ ದಿನಾಚರಣೆಯಲ್ಲಿ ನಮೋ ಭಾಗಿಯಾಗಲಿದ್ದು, ಪ್ರಧಾನಿ ಕಾರ್ಯಕ್ರಮಕ್ಕೆ ರಾಜಮನೆತನಕ್ಕೂ ಆಹ್ವಾನ ಸಿಕ್ಕಿದೆ .