ಮೈಸೂರು: ಬಹುರೂಪಿ ರಾಷ್ಟ್ರೀಯ ರಂಗೋತ್ಸವದ ಸಮಾರೋಪ ಕಾರ್ಯಕ್ರಮದಲ್ಲಿ, ಹಿಜಾಬ್ ನಿಷೇಧ ವಿಚಾರಕ್ಕೆ ಸಂಬಂಧಿಸಿದಂತೆ ವಾಗ್ಮಿ ಹಿರೇಮಗಳೂರು ಕಣ್ಣನ್ ಅವರು ಮಹಿಳೆಯರ ಬಗ್ಗೆ ಆಡಿದ್ದ ಮಾತುಗಳು ಇದೀಗ ವಿವಾದಕ್ಕೆ ಗುರಿಯಾಗಿದ್ದು, ಈ ಬಗ್ಗೆ ಸಾಮಾಜಿಕ ಜಾಲಾತಾನದಲ್ಲಿ ಭಾರಿ ಚರ್ಚೆಗಳಾಗುತ್ತಿದೆ.
ಮೈಸೂರಿನ ರಂಗಾಯಣದಲ್ಲಿ , ಬಹುರೂಪಿ ರಂಗೋತ್ಸವದ ಸಮಾರೋಪ ಸಮಾರಂಭದಲ್ಲಿ ಕಣ್ಣನ್ ಮಾತನಾಡುತ್ತಾ ‘ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ತೀರ್ಪು ನೀಡಿದೆ. ಶಾಲಾ– ಕಾಲೇಜುಗಳಿಂದ ಹಿಜಾಬ್ ಹೊರಟುಹೋಗಿದೆ. ಇನ್ಮುಂದೆ ಶಾಲೆಗೆ ಹ್ಯಾಗೆ ಬರಬೇಕು ಎಂದು ಹೇಳಬೇಕು; ಮುಖ ಮುಚ್ಕೊಂಡು ಬರಬೇಡ, …. ಮುಚ್ಕೊಂಡು ಬಾ. ಏನು ಭಯಾ ರೀ ಮಾತಾಡೋಕೆ? ಡಾಕ್ಟ್ರ ಹತ್ರ ಹೋದ್ರೆ ಎಲ್ಲ ಬಿಚ್ಚಿ ತೋರಿಸ್ತೀರಿ. ಮಾತಾಡಕೆ ಯಾಕೆ ಹೆದರಬೇಕು?’ ಎಂದಿದ್ದರು. ಇದೀಗ ಈ ಮಾತುಗಳಿಗೆ ಲೇಖಕರು, ವಿಮರ್ಶಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಶಿಧರ ಹೆಮ್ಮಾಡಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ‘….ಎಂದು ತುಚ್ಛವಾಗಿ ಮಾತನಾಡುವ ಈ ನೀಚ ತಾನು ಪೂಜೆ ಮಾಡುವ ಕೋದಂಡರಾಮ ದೇವಾಲಯದಲ್ಲಿ ರಾಮನ ಜೊತೆ ನಿಂತಿರುವ ಸೀತೆಯನ್ನು ಯಾವ ದೃಷ್ಟಿಯಿಂದ ನೋಡುತ್ತಿರಬಹುದು?’ ಎಂದು ಪ್ರಶ್ನಿಸಿದ್ದಾರೆ.
ಇನ್ನೂ ಕಣ್ಣನ್ರವರ ಈ ಮಾತುಗಳಿಗೆ ವಿಮರ್ಶಕ ರಹಮತ್ ತರೀಕೆರೆ ವಿಷಾದಿಸಿದ್ದು, ಕಣ್ಣನ್ ಅವರು, ಹಿಜಾಬ್ ಹಾಕಿಕೊಂಡು ಕಾಲೇಜಿಗೆ ಬರುವ ಹೆಣ್ಣು ಮಕ್ಕಳ ಬಗ್ಗೆ ತುಚ್ಛವಾದ ಶಬ್ದ ಬಳಸಿದ ಬಗ್ಗೆ ಓದಿದೆ. ಅವರಿಗೂ ಹೆಣ್ಣು ಮಕ್ಕಳು ಇರಬೇಕು. ಪ್ರಶ್ನೆಯೆಂದರೆ, ಎಲ್ಲಿಂದ ಹುಟ್ಟುತ್ತಿದೆ ಈ ಅಮಾನುಷ ಕಿಲುಬು, ಕ್ಷುದ್ರತೆ? ಕಲೆ ನುಡಿಯನ್ನು ಸಂವೇದನಶೀಲಗೊಳಿಸಬೇಕು. ಬದಲಿಗೆ ಮಲಿನಗೊಳಿಸುತ್ತಿದೆ’ ಎಂದು ಆಕ್ರೋಷ ವ್ಯಕ್ತ ಪಡಿಸಿದ್ದಾರೆ.
ಇದನ್ನೂ ಓದಿ: ವಾಹನ ಸವಾರರಿಗೆ ಕೇಂದ್ರದಿಂದ ಗುಡ್ ನ್ಯೂಸ್..! ಕೆಲವೇ ದಿನಗಳಲ್ಲಿ ಟೋಲ್ ಕಿರಿಕಿರಿಗೆ ಸಿಗುತ್ತೆ ಮುಕ್ತಿ..!