ಮೈಸೂರು : ಮೈಸೂರಿಗೆ ಬರುತ್ತಿರುವ ಪ್ರಧಾನಿ ಮೋದಿಗೆ ಗಿಫ್ಟ್ ರೆಡಿಯಾಗಿದ್ದು, ನಮೋಗಾಗಿ ಆಭರಣ ವ್ಯಾಪಾರಿಗಳು ವರ್ಣಾಕ್ಷರಗಳ ವಿಶೇಷ ಗಿಫ್ಟ್ ನೀಡಲಿದ್ದಾರೆ.
ಮೈಸೂರಿನ ಆಭರಣ ವ್ಯಾಪಾರಿಗಳಿಂದ ವಿಶೇಷ ಉಡುಗೊರೆಯಿದಾಗಿದೆ. ಸಂಸದ ಪ್ರತಾಪ್ ಸಿಂಹ ಮೂಲಕ ಮೋದಿಗೆ ವಿಶೇಷ ಗಿಫ್ಟ್ ನೀಡಲಾಗುತ್ತದೆ. ಯೋಗ ಕಾರ್ಯಕ್ರಮದಲ್ಲಿ ಮೋದಿಗೆ ನೆನಪಿನ ಕಾಣಿಕೆ ಇದಾಗಿದೆ. ಬಂಗಾರದ ಅಕ್ಷರಗಳಿಂದ ಕೆತ್ತನೆ ಮಾಡಿಸಲಾಗಿದ್ದು, ಮೈಸೂರು ಅರಮನೆ, ಮೋದಿ ಯೋಗದ ಭಂಗಿ ಹಾಗೂ ಪ್ರಧಾನಿ ಮೋದಿ ಭಾವಚಿತ್ರ ಒಳಗೊಂಡ ಕೆತ್ತನೆಯಾಗಿದೆ. ಸ್ವರ್ಣ ಲೇಪಿತ ಕೆತ್ತನೆಯ ಚಿತ್ರಪಟದಲ್ಲಿ ಯೋಗದ ಶ್ಲೋಕವಿದೆ. ಮೈಸೂರನ್ನ ಆಯ್ಕೆ ಮಾಡಿದ್ದಕ್ಕೆ ಚಿನ್ನದ ಅಕ್ಷರಗಳಲ್ಲಿ ಕೃತಜ್ಞತೆ ಸಲ್ಲಿಸಲಾಗುತ್ತಿದೆ. ವಿಶೇಷ ನೆನಪಿನ ಕಾಣಿಕೆ ಥೈಲ್ಯಾಂಡ್ನಲ್ಲಿ ಮಾಡಿಸಲಾಗಿದೆ.
ಇದನ್ನೂ ಓದಿ : ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ..! 15 ನಿಮಿಷ ರಿಸರ್ವ್ ಮಾಡಿಟ್ಟಿರುವ ನಮೋ..! ಆ 15 ನಿಮಿಷದ ಸೀಕ್ರೆಟ್ ಏನು..?