ಮೈಸೂರು: ಚಿರತೆ ಹಿಡಿಯಿರಿ.. ಇಲ್ಲವೇ ಗುಂಡು ಹಾರಿಸಿ ಎಂದು ನರಭಕ್ಷಕ ಚಿರತೆಗೆ ಗುಂಡಿಡಲು ಮೈಸೂರು ಡಿಸಿ ರಾಜೇಂದ್ರ ಮೌಖಿಕ ಆದೇಶ ನೀಡಿದ್ದಾರೆ.ಟಿ.ನರಸೀಪುರದ ಹೊರಳಹಳ್ಳಿಯಲ್ಲಿ ಜಿಲ್ಲಾಧಿಕಾರಿ ಹೇಳಿಕೆ ಕೊಟ್ಟಿದ್ದಾರೆ.
ಚಿರತೆ ಸೆರೆ ಹಿಡಿಯುವಂತೆ ಜನರು ಪ್ರತಿಭಟನೆ ಮಾಡುತ್ತಿದ್ದು, ರೈತ ಸಂಘಟನೆಗಳು ಹಾಗೂ ಹೊರಳಹಳ್ಳಿ ಗ್ರಾಮಸ್ಥರ ಪ್ರತಿಭಟನೆ ನಡೆಸಿದ್ದಾರೆ. ಟಿ.ನರಸೀಪುರದ ಪ್ರಮುಖ ಫ್ಲೈ ಓವರ್ ಬಂದ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಫ್ಲೈ ಓವರ್ನಲ್ಲೇ ಪ್ರತಿಭಟನಾಕಾರರು ಧರಣಿ ನಡೆಸಿದ್ದಾರೆ. ಸ್ಥಳಕ್ಕೆ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯ ಭೇಟಿ ಕೊಟ್ಟಿದ್ದು, ಸ್ಥಳೀಯ ಶಾಸಕ ಅಶ್ವಿನ್ ಕುಮಾರ್ , ಡಿ.ಸಿ.ರಾಜೇಂದ್ರ ಮನವೊಲಿಕೆ ಯತ್ನಿಸಿದ್ದಾರೆ.
ಇದನ್ನೂ ಓದಿ:ಮೈಸೂರಿನಲ್ಲಿ ಚಿರತೆ ದಾಳಿ : ಸಂಜೆ ನಂತರ ಜನರು ಮನೆಯಿಂದ ಹೊರ ಬರುವುದು ಬೇಡ : ಸಿಎಂ ಬೊಮ್ಮಾಯಿ..!