ಮೈಸೂರು: ಬಿಸ್ಕತ್ ಹಿಡಿದು ಬೀದಿಯಲ್ಲಿ ಕುಳಿತ ಕಂದನ ಬೆನ್ನತ್ತಿದ್ದೇಕೆ ಚಿರತೆ..? ತನ್ನ ಮರಿಗಳ ಹಸಿವು ನೀಗಿಸಲು ಹಸು ಕಂದನ ರಕ್ತ ಹೀರಿತಾ..? ಕರುಳು ಹಿಂಡುವಂತಿದೆ ಟಿ.ನರಸೀಪುರ ಬಾಲಕನ ಬಲಿ..
ಚಿರತೆ ನಿನ್ನೆ ರಾತ್ರಿ 11 ವರ್ಷದ ಜಯಂತ್ ಬಲಿ ಪಡೆದಿದೆ, ಹೊರಳಹಳ್ಳಿಯಲ್ಲಿ ನಿನ್ನೆ ರಸ್ತೆ ಬದಿ ಅವಿತು ಕುಳಿತು ಚಿರತೆ ಬಲಿ ಪಡೆದಿದೆ. ಹುಡುಕಿ ಬಂದಿದ್ದು ಬೀದಿ ನಾಯಿಗೆ, ಸಿಕ್ಕಿದ್ದು ಹಾಲುಗಲ್ಲದ ಹಸುಳೆ, ಜಯಂತ್ ಸಂಬಂಧಿಕರ ಮನೆಯಿಂದ ಬಂದು ಬಿಸ್ಕತ್ ತಿನ್ನುತ್ತಾ ಕುಳಿತಿದ್ದ ಈ ವೇಳೆ ನರಭಕ್ಷಕ ಚಿರತೆ ವಾಸನೆ ಹಿಡಿದುಬಂದು ಹೊತ್ತೊಯ್ದಿತ್ತು.
ಗ್ರಾಮದ ದಶಕಂಠ ಎಂಬುವರ ಪುತ್ರ 11 ವರ್ಷದ ಬಾಲಕ ಜಯಂತ್ ನಿನ್ನೆ ಸಂಜೆ ಮನೆಗೆ ತೆರಳುತ್ತಿದ್ದ, ಈ ವೇಳೆ ರಸ್ತೆ ಬದಿಯಲ್ಲಿ ಅವಿತಿದ್ದ ಚಿರತೆ ಬಾಲಕನನ್ನು ಎಳೆದೊಯ್ದಿತ್ತು, ಬಾಲಕ ಮನೆಗೆ ಬಾರದೇ ಪೋಷಕರು ಹಾಗೂ ಸಂಬಂಧಿಕರು ಹುಡುಕಿದ್ದರು, ರಸ್ತೆ ಬದಿ ಬಿಸ್ಕೆಟ್ ಪೊಟ್ಟಣ ಹಾಗೂ ರಕ್ತದ ಕಲೆಗಳು ಕಂಡು ಬಂದಿತ್ತು, ಇಂದು ಬೆಳಿಗ್ಗೆ ಬಾಲಕನ ಶವ ಒಂದೂವರೆ ಕಿಮೀ ದೂರದಲ್ಲಿ ಪತ್ತೆಯಾಗಿದೆ.
ಒಂದು ಕೈ, ತಲೆ ಭಾಗ ಬಿಟ್ಟು ಉಳಿದ ದೇಹದ ಭಾಗ ಪತ್ತೆಯಾಗಿದ್ದು, ನರಭಕ್ಷಕ ಚಿರತೆಮೂರು ತಿಂಗಳಲ್ಲಿ ನಾಲ್ಕು ಬಲಿ ಪಡೆದಿದೆ. ಈ ಹಿನ್ನೆಲೆ ಚಿರತೆ ಹಿಡಿಯುವಂತೆ ಫ್ಲೈಓವರ್ ತಡೆದು ಜನರ ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ:ನಾವು ಸಮಾನತೆ, ವಿಶ್ವಮಾನವತೆ ಬಗ್ಗೆ ಮಾತನಾಡುತ್ತೇವೆ : ಮಾಜಿ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ..!