ನೆಲಮಂಗಲ: ನೆಲಮಂಗಲದ ಬಾವಿಕೆರೆಯಲ್ಲಿ ನಡೆದ ಜನತಾ ಜಲಧಾರೆ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಸಿದ್ದರಾಮಯ್ಯರನ್ನು ಸೋಲಿಸಿ ಉತ್ತರ ಕೊಟ್ಟಿದ್ದೀರಿ. ಮೈಸೂರಿನಲ್ಲಿ ಜೆಡಿಎಸ್ ಒಂದೇ ಒಂದು ಸೀಟ್ ಗೆಲ್ಲಲ್ಲ ಎಂದಿದ್ರು. ಜೆಡಿಎಸ್‌ನಿಂದಲೇ ಬೆಳೆದಿದ್ದ ಸಿದ್ದರಾಮಯ್ಯ ಪಕ್ಷದ ಬಗ್ಗೆ ಹೇಳಿದ್ರು. ಹೀಗೆ ಹೇಳಿದ್ದ ಸಿದ್ದರಾಮಯ್ಯರನ್ನ ಸೋಲಿಸಿ ಉತ್ತರ ಕೊಟ್ಟಿದ್ದೀರಿ. ಕೊನೆ ಉಸಿರು ಇರುವವರೆಗೂ ಬಡವರಿಗಾಗಿ ಹೋರಾಡುತ್ತೇನೆ. ಅಧಿಕಾರಕ್ಕೆ ಬಂದ್ರೆ ನೀರಾವರಿ ಸೌಲಭ್ಯ, ಶಿಕ್ಷಣ, ಆರೋಗ್ಯಕ್ಕೆ ಒತ್ತು ಕೊಟ್ತೇನೆ ಎಂದು ಹೆಚ್.ಡಿ.ಕುಮಾರಸ್ವಾಮಿ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಫಿನಿಕ್ಸ್ನಂತೆ ಮೇಲೆದ್ದ ಜೆಡಿಎಸ್ ಕಲಿಗಳು… ಸಿಂಗಲ್ ಆಗಿ ಗದ್ದುಗೆ ಏರಲು ದಳಪತಿಗಳ ಶಪಥ…