ಬೆಂಗಳೂರು: ಈ ಹಿಂದೆ ಕೈಗಾರಿಕೆಗಾಗಿ ನೀಡಲಾಗಿದ್ದ ಜಮೀನನ್ನು ಬಳಕೆ ಮಾಡದಿರುವುದು ಕಂಡು ಬಂದಿದ್ದು, ಬಳಕೆ ಮಾಡದಿರುವ ಜಮೀನನ್ನು ವಾಪಸ್ ಪಡೆಯುತ್ತೇವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಸಚಿವ ಮುರುಗೇಶ್ ನಿರಾಣಿ ಕೈಗಾರಿಕೆಗಾಗಿ ನೀಡಲಾಗಿರುವ ಜಮೀನನ್ನು ಯಾರು ಬಳಕೆ ಮಾಡಿಲ್ಲ ಎಂಬುದನ್ನು ಗುರುತಿಸಿ ಅದನ್ನು ವಾಪಸ್ ಪಡೆಯುವ ಚಿಂತನೆ ಇದೆ. ಜಮೀನಿಗಾಗಿ ಹಣ ತುಂಬಿರುವವರಿಗೆ ಅವಕಾಶ ನೀಡುತ್ತೇವೆ. ಯಾರು ಹಣವನ್ನೇ ತುಂಬಿಲ್ಲ ಅವರಿಗೆ ನೋಟಿಸ್ ನೀಡುವ ಕೆಲಸ ಪ್ರಾರಂಭ ಮಾಡುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಕುಣಿಯೋಣು ಬಾರಾ ಎಂದ ಅನುಶ್ರೀ ಮಾಡಿದ್ದೇನು ? ರೂಮಲ್ಲಿ ಆ್ಯಂಕರ್ ಕಮ್ ನಟಿ ಜೊತೆ ನಡೀತಾ ಇತ್ತು’ಆ’ ಪಾರ್ಟಿ..!
ಕೈಗಾರಿಕಾ ಸಚಿವರ ಹಂತದಲ್ಲಿ ತೀರ್ಮಾನವಾಗುವ ಕೆಲಸವನ್ನು ನಾವು ಮಾಡುತ್ತೇವೆ. ಮುಖ್ಯ ಕಾರ್ಯದರ್ಶಿ ಹಂತದಲ್ಲಿರೋದನ್ನ ಅವರ ಕಡೆಯಿಂದ ಮಾಡಿಸುತ್ತೇವೆ. ಯಾರಿಗೂ ಕಿರುಕುಳ ನೀಡುವ ಕೆಲಸ ಆಗಬಾರದು. ಎಲ್ಲವನ್ನೂ ನೋಡಿಕೊಂಡು ಮೂವತ್ತು ದಿನ ಅವಕಾಶ ನೀಡಿ ನಂತರ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಮುರುಗೇಶ್ ನಿರಾಣಿ ತಿಳಿಸಿದ್ದಾರೆ.