ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡದ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡ ಮೊದಲು ಬೌಲಿಂಗ್ ಆಯ್ದುಕೊಂಡಿದೆ.
ಆರ್ ಸಿ ಬಿ ತಂಡ ಐಪಿಲ್ 14 ನೇ ಆವೃತ್ತಿಯ 2 ನೇ ಹಂತದಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ಸೋಲನುಭವಿಸಿತ್ತು. ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಪ್ಲೇ ಆಫ್ ಕನಸನ್ನು ಜೀವಂತವಾಗಿಸಿಕೊಳ್ಳಲು ಹೋರಾಟ ನಡೆಸಲಿದೆ. ಇನ್ನು ಮುಂಬೈ ಇಂಡಿಯನ್ಸ್ ಸಹ 2 ನೇ ಹಂತದಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ಸೋಲನುಭವಿಸಿದ್ದು, ಇಂದಿನ ಪಂದ್ಯದಲ್ಲಿ ಗೆಲವು ಸಾಧಿಸಿವುದು ಅನಿವಾರ್ಯವಾಗಿದೆ.
🚨 Toss Update from Dubai 🚨@mipaltan have won the toss & elected to bowl against @RCBTweets in Match 39 of the #VIVOIPL. #RCBvMI
Follow the match 👉 https://t.co/r9cxDv2Fqi pic.twitter.com/ja4JPAeKvZ
— IndianPremierLeague (@IPL) September 26, 2021
ಮುಂಬೈ ಇಂಡಿಯನ್ಸ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು ಸೌರಭ್ ತಿವಾರಿ ಬದಲು ಹಾರ್ದಿಕ್ ಪಾಂಡ್ಯಗೆ 11 ರ ಬಳಗದಲ್ಲಿ ಸ್ಥಾನ ದೊರೆತಿದೆ. ಇನ್ನು ಆರ್ ಸಿ ಬಿ ತಂಡದಲ್ಲೂ 3 ಬದಲಾವಣೆ ಮಾಡಲಾಗಿದ್ದು ಸೈನಿ, ಹಸರಂಗಾ ಮತ್ತು ಡಿಮ್ ಡೇವಿಡ್ ಬದಲು ಶಹಬಾಜ್ ಅಹಮದ್, ಕೈಲ್ ಜೇಮೀಸನ್ ಮತ್ತು ಕೇನಿಯಲ್ ಕ್ರಿಶ್ಚಿಯನ್ ತಂಡವನ್ನು ಆಡುವ 11 ರ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡ: ರೋಹಿತ್ ಶರ್ಮಾ (ಕ್ಯಾಪ್ಟನ್), ಕ್ವಿಂಟನ್ ಡಿ ಕಾಕ್ (ವಿ.ಕೀ.), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ಆಡಮ್ ಮಿಲ್ನೆ, ರಾಹುಲ್ ಚಾಹರ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್
Match 39. Mumbai Indians XI: Q de Kock, R Sharma, I Kishan, S Yadav, H Pandya, K Pollard, K Pandya, A Milne, R Chahar, T Boult, J Bumrah https://t.co/KkzfsLzXUZ #RCBvMI #VIVOIPL #IPL2021
— IndianPremierLeague (@IPL) September 26, 2021
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ವಿರಾಟ್ ಕೊಹ್ಲಿ (ಕ್ಯಾಪ್ಟನ್), ದೇವದತ್ ಪಡಿಕ್ಕಲ್, ಶ್ರೀಕರ್ ಭರತ್ (ವಿ.ಕೀ.), ಗ್ಲೆನ್ ಮ್ಯಾಕ್ಸ್‌ವೆಲ್, ಎಬಿ ಡಿವಿಲಿಯರ್ಸ್, ಶಹಬಾಜ್ ಅಹಮದ್, ಡೇನಿಯಲ್ ಕ್ರಿಶ್ಚಿಯನ್, ಕೈಲ್ ಜೇಮೀಸನ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜುವೇಂದ್ರ ಚಾಹಲ್
Match 39. Royal Challengers Bangalore XI: V Kohli, D Padikkal, KS Bharat, G Maxwell, AB de Villiers, S Ahmed, D Christian, K Jamieson, H Patel, M Siraj, Y Chahal https://t.co/KkzfsLzXUZ #RCBvMI #VIVOIPL #IPL2021
— IndianPremierLeague (@IPL) September 26, 2021