ಬೆಂಗಳೂರು : ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ಜ.27 ರಂದು ದೆಹಲಿಯಲ್ಲಿ ಬಿಜೆಪಿ ಚುನಾವಣಾ ಸಮಿತಿ ಮಹತ್ವದ ಸಭೆ ನಡೆಯಲಿದೆ.
ಸಿಎಂ ಬಸವರಾಜ್ ಬೊಮ್ಮಾಯಿ ಮತ್ತು ಮಾಜಿ ಸಿಎಂ ಯಡಿಯೂರಪ್ಪ ಜ.27 ಕ್ಕೆ ದೆಹಲಿಗೆ ತೆರಳಲಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೂ ಮೊದಲೇ ಬಿಜೆಪಿ ಕ್ಯಾಂಡಿಡೇಟ್ಸ್ ಲಿಸ್ಟ್ ಬಿಡುಗಡೆ ಆಗುತ್ತಾ, ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ದೆಹಲಿಯಲ್ಲಿ ಮಹತ್ವದ ಸಭೆ ನಡೆಯಲಿದೆ. ಸಭೆಯನ್ನು ದೆಹಲಿಯಲ್ಲಿ ಕೇಂದ್ರ ಬಿಜೆಪಿ ಕಛೇರಿಯಲ್ಲಿ ಆಯೋಜನೆ ಮಾಡಿದ್ದಾರೆ. ಹೈ ವೋಲ್ಟೆಜ್ ಮೀಟಿಂಗ್ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಷಾ ನೇತೃತ್ವದಲ್ಲಿ ನಡೆಯಲಿದೆ. ಕೇಂದ್ರ ಬಿಜೆಪಿ ನಾಯಕರು ರಾಜ್ಯದ ಚುನಾವಣೆಯ ರಣತಂತ್ರ ರೂಪಿಸಲಿದ್ದಾರೆ. ಕರುನಾಡಿನ ಎಲೆಕ್ಷನ್ ನಲ್ಲಿ ಮಿಷನ್ 150 ಗೆಲ್ಲಲು ಮೆಗಾ ಮೀಟಿಂಗ್ ನಡೆಯಲಿದೆ, ಮುಂದಿನ ರಥ ಯಾತ್ರೆಯ ಬಗ್ಗೆ ಕೇಂದ್ರ ನಾಯಕರ ನೇತೃತ್ವದಲ್ಲಿ ಚರ್ಚೆ ನಡೆಯುವ ಸಾಧ್ಯತೆಯಿದೆ. ಫೆಬ್ರವರಿಯಲ್ಲಿ ರಾಜ್ಯದ ರಥ ಯಾತ್ರೆ ನಡೆಸಲು ಚಿಂತನೆ ನಡೆಸಿದ್ದು, ರಾಜ್ಯದಲ್ಲಿ ನೂತನವಾಗಿ ಸ್ಥಾಪನೆಯಾಗಿರುವ ಕೆ ಆರ್ ಪಿ ಪಿ ಪಕ್ಷದ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಯಿದೆ. ಮತ್ತೆ ಮಾಜಿ ಸಚಿವ ಜನಾರ್ಧನ ರೆಡ್ಡಿಯನ್ನು ವಾಪಾಸ್ ಬಿಜೆಪಿಗೆ ಕರೆತರಲು ಮೆಗಾ ಪ್ಲಾನ್ ನಡೆದಿದೆ.
ಇದನ್ನೂ ಓದಿ : ತಾರಕಕ್ಕೇರಿದ ಸಿದ್ದು v/s ಸುಧಾಕರ್ ಮಾತಿನ ಕಾಳಗ… ಹಳೇ ಗುರುವಿಗೆ ಹಳೇ ಶಿಷ್ಯನಿಂದ ಸವಾಲ್ ಮೇಲೆ ಸವಾಲ್..!