ಬೆಂಗಳೂರು: ಮಾಂಸ ಪ್ರಿಯರಿಗೆ ಖಾರ- ಖಾರವಾಗಿರುವ ಚಿಕನ್ ರೆಸಿಪಿಗಳೆಂದರೆ ಅಚ್ಚು ಮೆಚ್ಚು… ಅದರಲ್ಲೂ ಮಳೆಗಾಲದ ಚಳಿಗೆ ಹೆಚ್ಚಾಗಿ ನಾನ್ ವೆಜ್ ಅಡುಗೆಯನ್ನೇ ಬಯಸುತ್ತಾರೆ.. ಅಂತಹ ರೆಸಿಪಿಗಳಲ್ಲಿ ಎಲ್ಲರ ಅಚ್ಚುಮೆಚ್ಚಿನ ಅಡುಗೆ ಗ್ರೀನ್ ಚಿಲ್ಲಿ ಚಿಕನ್… ಇಲ್ಲಿದೆ ಈಸಿ ರೆಸಿಪಿ…
ಬೇಕಾಗುವ ಸಾಮಗ್ರಿಗಳು:
ಅರ್ಧ ಕೆ.ಜಿ ಚಿಕನ್, ಹಸಿಮೆಣಸಿನಕಾಯಿ 6-7, ಚಕ್ಕೆ, ಲವಂಗ ಪುಡಿ ಅರ್ಧ ಚಮಚ, ಪುದೀನ ಸೊಪ್ಪು ಸ್ವಲ್ಪ, ಕೊತ್ತಂಬರಿ ಸೊಪ್ಪು ಸ್ವಲ್ಪ, ಮೊಸರು 2 ಚಮಚ, ಎಣ್ಣೆ 1 ಚಮಚ, ಶುಂಠಿ– ಬೆಳ್ಳುಳ್ಳಿ ಪೇಸ್ಟ್ ಅರ್ಧ ಚಮಚ, ಕಾಳುಮೆಣಸು 4, ಉಪ್ಪು.
ತಯಾರಿಸುವ ವಿಧಾನ:
ಒಂದು ಬಾಣಲೆಯಲ್ಲಿ ಹಸಿಮೆಣಸು, ಪುದೀನ, ಕೊತ್ತಂಬರಿ ಸೊಪ್ಪು ಮತ್ತು ಸ್ವಲ್ಪ ಎಣ್ಣೆ ಸೇರಿಸಿ ಹುರಿದುಕೊಳ್ಳಿ. ನಂತರ ಮತ್ತೊಂದು ಪ್ಯಾನ್ಗೆ ಸ್ವಲ್ಪ ಅಡುಗೆ ಎಣ್ಣೆ ಹಾಕಿ, ತೊಳೆದ ಚಿಕನ್ ಸೇರಿಸಿ ಫ್ರೈ ಮಾಡಿ, ನಂತರ ಹುರಿದ ಎಲ್ಲಾ ಪದಾರ್ಥಗಳನ್ನು ಮಿಕ್ಸ್ ಮಾಡಿ, ಅದಕ್ಕೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಮತ್ತು ಮೇಲಿನ ಎಲ್ಲಾ ಮಸಾಲೆ ಪುಡಿಯನ್ನು ಸೇರಿಸಿ, ಮೊಸರು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಗ್ರೇವಿ ತಯಾರಿಸಿ. ಕೊನೆಯಲ್ಲಿ ಸ್ವಲ್ಪ ನಿಂಬೆ ರಸವನ್ನು ಸೇರಿಸಿದರೆ ಗ್ರೀನ್ ಚಿಲ್ಲಿ ಚಿಕನ್ ಸಿದ್ಧ.
ಇದನ್ನೂ ಓದಿ: ಕಾವೇರಿ ಪ್ರವಾಹಕ್ಕೆ ತತ್ತರಿಸಿದ ನಾಲ್ಕು ಜಿಲ್ಲೆ… ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ ತತ್ತರ…