ಅಪ್ಪ-ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು ಎಂಬ ಗಾದೆ ಮಾತು ಕೇಳಿದ್ದೀರಿ. ಆದರೆ ಅಪ್ಪ-ಅಮ್ಮನ ಜಗಳಕ್ಕೆ ಮಗುವೇ ಬಲಿಯಾದ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹೌದು, ಬೆಂಗಳೂರಿನಲ್ಲಿ ಮೂರುವರೆ ವರ್ಷದ ನಾಪತ್ತೆಯಾಗಿದ್ದ ಮಗು ಶವವಾಗಿ ಪತ್ತೆಯಾದ ಪ್ರಕರಣದ ಬೆನ್ನು ಹತ್ತಿದ ಪೊಲೀಸರೇ ಸತ್ಯ ಬೆಳಕಿಗೆ ಬರುತ್ತಿದ್ದಂತೆ ಶಾಕ್ ಆಗಿದ್ದಾರೆ.
ಇದನ್ನೂ ಓದಿ: ಕೊರೋನಾ ಗೈಡ್ಲೈನ್ ಉಲ್ಲಂಘನೆ ಮಾಡಿದವರ ಮೇಲೆ ಬಿಬಿಎಂಪಿ ಕ್ರಮ ಕೈಗೊಂಡಿದ್ದು ಹೇಗೆ ಗೊತ್ತಾ..?
ನಾಗರಬಾವಿ ದೀಪಾ ಕಾಂಪ್ಲೆಕ್ಸ್ ಬಳಿ ಇತ್ತೀಚೆಗೆ ಮೂರುವರೆ ವರ್ಷದ ಮಗುವಿನ ಮೃತದೇಹ ಇಂದು ಮುಂಜಾನೆ ಬಿಡಿಎ ಕಾಂಪ್ಲೆಕ್ಸ್ ಬಳಿ ಪತ್ತೆಯಾಗಿತ್ತು. ಹಿಂದಿನ ದಿನ ತಾಯಿ ಮಗು ಕಾಣೆಯಾಗಿದೆ ಎಂದು ದೂರು ನೀಡಿದ್ದರು.
ಪೋಷಕರು ಕೂಲಿ ಕೆಲಸ ಮುಗಿಸಿ ಬಂದಾಗ ಮನೆಯಲ್ಲಿ ಮಗು ನಾಪತ್ತೆಯಾಗಿತ್ತು. ತಡರಾತ್ರಿ ವರೆಗೂ ಮಗುವಿಗಾಗಿ ಪೋಷಕರ ಹುಡುಕಾಟ ನಡೆಸಿದ್ದರೂ ಮಗು ಪತ್ತೆಯಾಗದ ಹಿನ್ನಲೆ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಇಂದು ಬೆಳಿಗ್ಗೆ ಮಗು ಶವವಾಗಿ ಪತ್ತೆಯಾಗಿತ್ತು. ಅನ್ನಪೂರ್ಣೇಶ್ವರಿ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪೋಸ್ಟ್ ಮಾರ್ಟಂಗೆ ಮಗುವಿನ ಮೃತ ದೇಹ ರವಾನಿಸಿದ್ದರು.
ಇದನ್ನೂ ಓದಿ: ಅಡುಗೆ ಮಾಡೋರಿಗೆ ಕಾದಿದೆ ನೋಡಿ ಶಾಕಿಂಗ್ ನ್ಯೂಸ್…! ತೊಗರಿ ಬೇಳೆಗೆ ಬಂತು ಬಂಗಾರದ ಬೆಲೆ..?
ಮಗು ನಾಪತ್ತೆ ಎಂದು ಪೊಲೀಸರಿಗೆ ದೂರು ನೀಡುವಾಗ ತಾಯಿ ಕೂಡ ಜೊತೆಯಲ್ಲೇ ಇದ್ದರೂ ಏನೂ ಗೊತ್ತಿಲ್ಲದಂತೆ ನಾಟಕ ಆಡಿದ್ದಳು. ನಿನ್ನೆ ಸಂಜೆ ಗೋಭಿ ಮಂಚೂರಿ ತಿನ್ನಿಸಲು ಮಗುವನ್ನ ಕರೆದುಕೊಂಡು ಹೋಗಿದ್ದ ತಾಯಿ, ಮಗುವನ್ನು ಕತ್ತು ಹಿಸುಕಿ ಕೊಂದು ಏನೂ ಗೊತ್ತಿಲ್ಲದಂತೆ ಮನೆಗೆ ಮರಳಿದ್ದಳು.
ಇದನ್ನೂ ಓದಿ: ಹಬ್ಬಕ್ಕೆ ಊರಿಗೆ ಹೋಗಲು ಬಸ್ಗಳಿಲ್ಲದೆ ಪರದಾಡುವ ಜನರಿಗೆ ರೈಲ್ವೇ ಇಲಾಖೆಯಿಂದ ಗುಡ್ನ್ಯೂಸ್…!
ಮನೆಯಲ್ಲಿ ಸಣ್ಣಪುಟ್ಟ ಜಗಳ ಆದಾಗಲೆಲ್ಲಾ ಮಗಳು ತಂದೆಯ ಪರ ನಿಲ್ಲುತ್ತಿದ್ದಳು ಎಂಬ ಕಾರಣಕ್ಕೆ ಸಿಟ್ಟಿಗೆದ್ದ ತಾಯಿ ಈ ಕೃತ್ಯ ಎಸಗಿರುವುದಾಗಿ ವಿಚಾರಣೆ ವೇಳೆ ತಾಯಿ ಬಾಯಿ ಬಿಟ್ಟಿದ್ದಾಳೆ. ಇದೀಗ ತಾಯಿ ಕಂಬಿ ಎಣಿಸುತ್ತಿದ್ದಾಳೆ.