ಕಿವ್: ಉಕ್ರೇನ್‌ನ ರಾಜಧಾನಿ ಕೀವ್ ಆಸುಪಾಸಿನಲ್ಲಿ 900ಕ್ಕೂ ಅಧಿಕ ನಾಗರಿಕರ ಶವಗಳು ಪತ್ತೆಯಾಗಿವೆ. ಬಹುತೇಕ ಶವಗಳ ಮೇಲೆ ಗುಂಡಿನ ಗುರುತುಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೀವ್‌ನಲ್ಲಿ ರಷ್ಯಾದ ಪಡೆಗಳನ್ನು ಹಿಂಪಡೆದ ಬಳಿಕ ಅಲ್ಲಿನ ಪ್ರಾದೇಶಿಕ ಪೊಲೀಸ್ ಪಡೆ ಕಾರ್ಯಾಚರಣೆ ನಡೆಸುತ್ತಿದೆ. ಕೀವ್ ಪ್ರಾದೇಶಿಕ ಪೊಲೀಸ್ ಪಡೆಯ ಮುಖ್ಯಸ್ಥ ಆಂಡ್ರಿ ನೆಬಿಟೋವ್ ಅವರು, ‘ಬಹುತೇಕ ಶವಗಳು ರಸ್ತೆಗಳಲ್ಲಿ ಅನಾಥವಾಗಿದ್ದವು. ಮಾಹಿತಿ ಪ್ರಕಾರ, ಶೇ 95ರಷ್ಟು ಮಂದಿ ಗುಂಡಿನೇಟಿನಿಂದಲೇ ಸತ್ತಿದ್ದಾರೆ ಎಂದು ತಿಳಿಸಿದ್ದಾರೆ. ಇನ್ನು ರಷ್ಯಾದ ಸೇನೆಯು ಅತಿಕ್ರಮಣದ ಅವಧಿಯಲ್ಲಿ ಜನರನ್ನು ಸಹಜವಾಗಿ ಹತ್ಯೆ ಮಾಡಿತ್ತು ಅಂತ ಅನುಮಾನ ಸೃಷ್ಟಿಯಾಗಿದೆ. ಇನ್ನೂ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ರಷ್ಯಾ ಪಡೆಗಳು ನಡೆಸಿದ ದಾಳಿಗಳಲ್ಲಿ ಉಕ್ರೇನ್‌ನ 2,500 ರಿಂದ 3,000 ಮಂದಿ ಸೈನಿಕರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಜುಲೈ 1ರಿಂದ ಪ್ರತಿ ಮನೆಗೆ 300 ಯೂನಿಟ್ ವಿದ್ಯುತ್ ಉಚಿತ..! ಪಂಜಾಬ್ ಸಿಎಂ ಭಗವಂತ್ ಮಾನ್ ಘೋಷಣೆ..