ವಿಜಯಪುರ: ಕೊಟ್ಟ ಹಣವನ್ನು ವಾಪಸ್ ಕೇಳಿದ್ದಕ್ಕೆ ಜೀಪ್ ಹತ್ತಿಸಿ ಮಹಿಳೆ ಕೊಲೆ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಈ ಘಟನೆಯು ವಿಜಯಪುರ ಜಿಲ್ಲೆಯ ತಿಕೋಟಾ ಪಟ್ಟಣದ ಹೊನವಾಡ ಗ್ರಾಮದಲ್ಲಿ ನಡೆದಿದೆ. ಸಾಗರ ಖತಾರ, ಮಾರುತಿ ಥೋರತ ಎಂಬ ಆರೋಪಿಗಳು ಶೋಭಾ ಸೋಮನಿಂಗ ಮೊಗದರೆ(45) ಅವರ ಮೇಲೆ ಜೀಪ್ ಹತ್ತಿಸಿ ಕೊಲೆ ಮಾಡಿದ್ದರು.
ಆರೋಪಿಗಳು ಕಬ್ಬುಕಟಾವು ಮಾಡಲು ಗ್ಯಾಂಗ್ ತರುತ್ತೇವೆ ಎಂದು ಕೊಲೆಯಾದ ಮಹಿಳೆ ಪತಿ ಸೋಮನಿಂಗನಿಂದ 45 ಲಕ್ಷ ಪಡೆದುಕೊಂಡಿದರು. ಆದರೆ ಕಬ್ಬು ಕಟಾವು ಮಾಡುವ ಗ್ಯಾಂಗ್ ಕರೆತರದೆ ವಂಚನೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸೋಮನಿಂಗ ಅವರು ಸಾಗರ ಹಾಗೂ ಮಾರುತಿಯ ಬಳಿ ಹಣ ವಾಪಸ್ ನೀಡುವಂತೆ ಕೇಳಿದ್ದರು. ಇದೇ ಕಾರಣಕ್ಕೆ ಆರೋಪಿಗಳು ಸೋಮನಿಂಗನ ಪತ್ನಿಯ ಮೇಲೆ ಜೀಪ್ ಹತ್ತಿಸಿ ಕೊಲೆಗೈದು ಪರಾರಿಯಾಗಿದ್ದರು. ಈ ಸಂಬಂಧ ತಿಕೋಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ : ನಿಪ್ಪಾಣಿ ಪೋಲಿಸರಿಂದ ಭರ್ಜರಿ ಕಾರ್ಯಾಚರಣೆ… ನಕಲಿ ಕೋವಿಡ್ ನೆಗೆಟಿವ್ ವರದಿ ನೀಡುವರು ಅರೆಸ್ಟ್…