ಮೇಘನಾ ರಾಜ್ ಸರ್ಜಾರವರಿಗೆ ಗುರುವಾರ ಗಂಡು ಮಗು ಜನಿಸಿದ್ದು ತೀವ್ರ ದುಃಖದಲ್ಲಿದ್ದ ಸರ್ಜಾ ಕುಟುಂಬಕ್ಕೆ ಸಂತಸವನ್ನು ತಂದಿದೆ. ಮೇಘನಾ ರಾಜ್ ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ನಟಿಸಿ ಖ್ಯಾತಿಗಳಿಸಿದ್ದಾರೆ.
ಬೆಂಗಳೂರು ಡೇಸ್, ರಾಜಾ ರಾಣಿ ಚಿತ್ರದ ನಾಯಕಿ ನಜ್ರಿಯಾ ನಜೀಮ್ರವರ ಜೊತೆ ಮೇಘನಾ ರಾಜ್ ಸರ್ಜಾ ‘ಮ್ಯಾಡ್ ಡ್ಯಾಡ್’ ಎನ್ನುವ ಮಲಯಾಳಂ ಚಿತ್ರದಲ್ಲಿ ನಟಿಸಿದ್ದು ಅವರೊಡನೆ ಉತ್ತಮ ಒಡನಾಟ ಹೊಂದಿದ್ದಾರೆ. ಭಾನುವಾರ (ಅ25) ಚಿರು -ಮೇಘನಾ ಕಂದಮ್ಮನನ್ನು ನೋಡಲು ನಜ್ರಿಯಾ ಹಾಗೂ ಪತಿ ಫಹಾದ್ ಫಾಸಿಲ್ ಬೆಂಗಳೂರಿಗೆ ಬಂದಿದ್ದರು. ಮೇಘನಾರ ಭೇಟಿಯ ಬಳಿಕ ಕನಕ ಪುರ ರಸ್ತೆಯ ಬೃಂದಾವನ ಫಾರ್ಮ್ ಹೌಸ್ನಲ್ಲಿರುವ ಚಿರುವಿನ ಸಮಾಧಿಗೆ ತೆರಳಿದರು.