ಮೈಸೂರು: ಪಕ್ಷದ ಆಂತರಿಕ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಮಾತನಾಡುವ ಅವಶ್ಯಕತೆ ಏನಿತ್ತು ಎಂದು ಯೂತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ನಲಪಾಡ್ ಅವರು ‘ನಾನು ರಮ್ಯಾ ಅವರ ಕುರಿತು ವೈಯಕ್ತಿಕ ಟೀಕೆ ಮಾಡುತ್ತಿಲ್ಲ. ನಮ್ಮ ನಾಯಕರ ಬಗ್ಗೆ ಯಾರೇ ಮಾತನಾಡಿದರೂ ನಾನು ಅದಕ್ಕೆ ರಿಯಾಕ್ಟ್ ಮಾಡುತ್ತೇನೆ. ಪಕ್ಷದ ಆಂತರಿಕ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಮಾತನಾಡುವ ಅವಶ್ಯಕತೆ ಏನಿತ್ತು. ರಮ್ಯಾ ಪಕ್ಷದ ಒಳಗಿದ್ದಾರೋ, ಆಚೆ ಇದ್ದಾರೋ ಗೊತ್ತಿಲ್ಲ. ನಾಲ್ಕು ವರ್ಷಗಳಿಂದ ಇಲ್ಲದವರು ಸಡನ್ ಆಗಿ ಬಂದಿದ್ದಾರೆ.
ನಿಮಗೆ ಡಿ.ಕೆ. ಶಿವಕುಮಾರ್ ಮತ್ತು ಎಂ.ಬಿ. ಪಾಟೀಲ್ ಪರಿಚಯ ಇದ್ದಾರೆ. ಫೋನ್ ನಲ್ಲಿ ಮಾತಾಡಿ. ಇದೆಲ್ಲಾ ಯಾಕೆ? ನಾನೇನು ರಮ್ಯಾಗೆ ಪಾಠ ಮಾಡಲು ಹೊಗಿಲ್ಲ. ಮುಂದೆಯೂ ಅವರಿಗೆ ಪಾಠ ಮಾಡಲ್ಲ. ನನ್ನ ವಿಚಾರ ವೈಯಕ್ತಿ. ಅದು ಹೊಸದೇನಲ್ಲ. ಅದನ್ನು ಪ್ರಸ್ತಾಪ ಮಾಡೋದ್ರಿಂದ ರಮ್ಯಾಗೆ ಏನು ಒಳ್ಳೆಯದಾಗುತ್ತೆ ಗೊತ್ತಿಲ್ಲ. ಪಕ್ಷದಲ್ಲಿ ಒಂದು ಪರ್ಸೆಂಟ್ ಸಹ ಭಿನ್ನಾಭಿಪ್ರಾಯ ಇಲ್ಲ.
ನಮ್ಮ ನಾಯಕರಾದ ರಾಹುಲ್ ಗಾಂಧಿ ಪಕ್ಷದ ವಿಚಾರವನ್ನು ವೇದಿಕೆಗಳಲ್ಲಿ ಮಾತನಾಡಬೇಡಿ ಎಂದಿದ್ದಾರೆ. ಅದನ್ನು ನಾವು ಪಾಲಿಸುತ್ತೇವೆ. ನಾವು ಸರಿಯಾಗಿದ್ದೇವೆ, ಸರಿ ಮಾಡಿಕೊಳ್ಳುವ ಅವಶ್ಯಕತೆ ಏನಿಲ್ಲ. ರಮ್ಯಾ ಇದನ್ನೆಲ್ಲಾ ನಿಲ್ಲಿಸಬೇಕು. ನನ್ನ ಮೇಲೆ ಅಸಮಾಧಾನ ಇದ್ದರೆ ಫೋನ್ ನಲ್ಲಿ ಮಾತನಾಡಿ, ಸೋಷಿಯಲ್ ಮೀಡಿಯಾದಲ್ಲಿ ಬೇಡ ಎಂದು ನಲಪಾಡ್ ತಿಳಿಸಿದ್ದಾರೆ.
ಇದನ್ನೂ ಓದಿ: ಸಂಪುಟ ಸರ್ಜರಿ ಚರ್ಚೆ ಹೊತ್ತಲ್ಲೇ ಸಿಎಂ ಬೊಮ್ಮಾಯಿ-ಬಿಎಸ್ವೈ ಭೇಟಿ..! ಮಾಜಿ ಸಿಎಂ ಬಿಎಸ್ವೈ ನಿವಾಸಕ್ಕೆ ಭೇಟಿ ನೀಡಿ ಚರ್ಚೆ..!