ಮಂಡ್ಯ: ಬಿಜೆಪಿ ಸರ್ಕಾರ ನೀಚಗೆಟ್ಟ ಸರ್ಕಾರ, ಹೆಣಗಳ ಮೇಲೆ ರಾಜಕೀಯ ಮಾಡುತ್ತಿದೆ ಎಂದು ಯೂತ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ನಲಪಾಡ್ ಬಿಜೆಪಿಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಗೃಹ ಇಲಾಖೆಯನ್ನು ನಾನು ಚಾಲೆಂಜಾಗಿ ತಗೊಂಡಿದ್ದೀನಿ..! ಖಾತೆ ಬದಲಾವಣೆಗೆ ನಾನು ಕೇಳೇ ಇಲ್ಲ: ಆರಗ ಜ್ಞಾನೇಂದ್ರ…
ಮಂಡ್ಯದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ನಲಪಾಡ್ ‘ಕೇಂದ್ರ ಸರ್ಕಾರ ಕೋವಿಡ್ ನಿಂದಾಗಿ 4.7 ಲಕ್ಷ ಜನರು ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದೆ. ಆದರೆ ವಿಶ್ವ ಆರೋಗ್ಯ ಸಂಸ್ಥೆ ವರದಿ ಪ್ರಕಾರ ಭಾರತದಲ್ಲಿ 47 ಲಕ್ಷ ಜನರು ಮೃತಪಟ್ಟಿದ್ಧಾರೆ. ಬಿಜೆಪಿ ಸರ್ಕಾರ ಹೆಣಗಳ ಮೇಲೆ ರಾಜಕೀಯ ಮಾಡ್ತಿದೆ. ಕೋವಿಡ್ ನಿಂದಾಗಿ ಮೃತಪಟ್ಟವರ ಕುಟುಂಬಸ್ಥರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಪರಿಹಾರ ನೀಡಿಲ್ಲ. ಕೋವಿಡ್ ನಿಂದಾಗಿ ರಾಷ್ಟ್ರದ ಜನರು ನರಕ ಅನುಭವಿಸಿದ್ದಾರೆ. ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದೆ. ಕೇಂದ್ರ ಸರ್ಕಾರ ಎಲ್ಲದರಲ್ಲೂ ಲೂಟಿ ಹೊಡೆದಿದೆ ಎಂದು ಕಿಡಿ ಕಾರಿದ್ಧಾರೆ.
40% ಸರ್ಕಾರದ ವಿರುದ್ಧ ನಾವು ಹೋರಾಟ ನಡೆಸುತ್ತೇವೆ. ಸಾವಲ್ಲೂ 40% ದುಡ್ಡು ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ಸ್ಕ್ಯಾಮ್ ಮೇಲೆ ಸ್ಕ್ಯಾಮ್ ಮಾಡ್ತಿದೆ. ಇವರ ನಿಜವಾದ ಮುಖ ಹೊರಗೆ ಬರುತ್ತಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ನಲಪಾಡ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.