ಇಂಡೋನೆಷ್ಯಾ : G-20 ಶೃಂಗಸಭೆಯಲ್ಲೂ ಮೋದಿ-ಬೈಡನ್ ಗುಪ್ತ್..ಗುಪ್ತ್ ಮಾತು ನಡೆಸಿದ್ಧಾರೆ. ಬೈಡನ್ ಪ್ರಧಾನಿ ಮೋದಿ ಭುಜದ ಮೇಲೆ ಕೈಹಾಕಿ ಮಾತನಾಡಿಸಿದ್ಧಾರೆ. ಶೇಕ್ ಹ್ಯಾಂಡ್ ಮಾಡಿ ಕೆಲಕಾಲ ನಾಯಕರ ಗೌಪ್ಯ ಚರ್ಚೆ ನಡೆಯಿತು.
ಅಮೇರಿಕ ಅಧ್ಯಕ್ಷ ಬೈಡನ್ ಜೊತೆ ಮೋದಿ ಗಹನ ಚರ್ಚೆ ನಡೆಸಿದರು. ರಷ್ಯಾ-ಉಕ್ರೇನ್ ವಾರ್ ಬಗ್ಗೆ ಚರ್ಚಿಸಿದ್ರಾ ಮೋದಿ-ಬೈಡನ್..? ಕೊರೋನಾ ನಂತರದ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಚರ್ಚೆ ಮಾಡಿದ್ರಾ..? ಉಕ್ರೇನ್ ಸಂಘರ್ಷ ಸ್ಥಗಿತಕ್ಕೆ ಮೋದಿ ಪ್ರಯತ್ನಿಸಿದ್ದಾ. ಉಕ್ರೇನ್ ಅಧ್ಯಕ್ಷ ಝಲನ್ಸ್ಕಿ ಜತೆ ನಮೋ ಚರ್ಚೆ ನಡೆಸಿದ್ದು, ರಷ್ಯಾ ಅಧ್ಯಕ್ಷ ಪುಟಿನ್ಗೂ ನಮೋ ಯುದ್ಧ ಬೇಡವೆಂದು ಸಲಹೆ ನೀಡಿದ್ಧಾರೆ. ಮೋದಿ ಅವರು ರಷ್ಯಾ-ಉಕ್ರೇನ್ ಯುದ್ಧ ಸ್ಥಿತಿ ಪರಿಹಾರಕ್ಕೆ ಯತ್ನಿಸಿದ್ದಾರೆ. ಹೀಗಾಗಿ ಪ್ರಧಾನಿ ಮೋದಿ ಜೊತೆ ಬೈಡನ್ ಪ್ರತ್ಯೇಕ ಸಮಾಲೋಚನೆ ನಡೆಸಿದರು.
ಇದನ್ನು ಓದಿ : ಕೋಲಾರದಲ್ಲಿ ಸಿದ್ದು ಮಣಿಸಲು ದಳಪತಿಗಳ ಬಿಗ್ ಪ್ಲಾನ್..! ಕಾರ್ಯತಂತ್ರದ ಬಗ್ಗೆ ಇಬ್ರಾಹಿಂ ಜೊತೆ ಸುದೀರ್ಘ ಚರ್ಚೆ ನಡೆಸಿರುವ ಹೆಚ್ಡಿಕೆ..!