ಬೀದರ್: ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ ಹಂಗಾಮಿ ಆಯುಕ್ತ ಅಭಯ್ ಕುಮಾರ್ 30-06-2022ರಂದೇ ವರ್ಗಾವಣೆಯಾಗಿದ್ರೂ ಅಭಯವರನ್ನ ರಿಲೀವ್ ಮಾಡದ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ವಿರುದ್ಧ MLC ಅರವಿಂದಕುಮಾರ್ ಅರಳಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಮನವಿ ಮೇರೆಗೆ ಜಿಲ್ಲಾಧಿಕಾರಿ ಪತ್ರ ಬರೆದು ವರ್ಗಾವಣೆ ತಡೆ ಹಿಡಿಯಲು ಸರ್ಕಾರಕ್ಕೆ ಮನವಿ ಮಾಡಿದ್ದರು, ವರ್ಗಾವಣೆ ಆದ್ಮೆಲು ಕೂಡಾ ಅಧ್ಯಕ್ಷರು ಮನವಿ ಮಾಡಿದ ತಕ್ಷಣ ಅವರ ಪರವಾಗಿ ಡಿಸಿ ಪತ್ರ ಬರೆದು ವರ್ಗಾವಣೆ ತಡೆ ಹಿಡಿಯಲು ಸರ್ಕಾರಕ್ಕೆ ಮನವಿ ಮಾಡಿದ್ದು ಎಷ್ಟು ಸರಿ , ಇವ್ರು ಬೀದರ್ ಜಿಲ್ಲೆ ಡಿಸಿನಾ ಅಥವಾ ಬಿಜೆಪಿ ಕಾರ್ಯಕರ್ತನಾ ಎಂದು MLC ಅರವಿಂದ ಅರಳಿ ಕಿಡಿಕಾರಿದ್ದಾರೆ.

ಇದನ್ನೂ ಓದಿ:ಕಾಂಗ್ರೆಸ್ ಟಿಕೆಟ್‍ಗೆ ಜೈಲಿನಿಂದಲೇ ಅರ್ಜಿ ಸಲ್ಲಿಸಿದ ಮುರುಘಾ ಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ. ಬಸವರಾಜನ್..!