ಚಿತ್ರದುರ್ಗ: ಚಳ್ಳಕೆರೆಯಲ್ಲಿ MLA-ತಹಶೀಲ್ದಾರ್ ಬಹಿರಂಗ ಸಮರ ಮುಂದುವರೆದಿದ್ದು, KDP ಸಭೆಯಲ್ಲಿ ತಹಶಿಲ್ದಾರ್ಗೆ ಶಾಸಕ T. ರಘುಮೂರ್ತಿ ಪುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ತಹಶೀಲ್ದಾರ್-ಶಾಸಕರ ನಡುವೆ ಅಧಿಕಾರಿಗಳ ಮುಂದೆಯೇ ವಾಗ್ವಾದ ನಡೆಸಿದ್ದು, MLA ಕ್ಲಾಸ್ ತಗೆದುಕೊಳ್ತಿದ್ದಂತೆ ಸಭೆಯಿಂದಲೇ ತಹಶೀಲ್ದಾರ್ ಹೊರನಡೆದಿದ್ದಾರೆ. ಸರ್ಕಾರಿ ವಾಹನ ದುರ್ಬಳಕೆ, ಖಾಸಗಿ ಸಂಸ್ಥೆಗಳ ಭೂಮಿ ವಿಚಾರಕ್ಕೆ ವಾಗ್ವಾದ ನಡೆದಿದ್ದು, ತಹಶೀಲ್ದಾರ್ ಎನ್. ರಘುಮೂರ್ತಿಗೆ ಈ ಹಿಂದೆಯೂ ಶಾಸಕರು ಕ್ಲಾಸ್ ತಗೊಂಡಿದ್ದರು.
ಕೆಡಿಪಿ ಸಭೆಯಲ್ಲಿ ನನ್ನ ಟಾರ್ಗೆಟ್ ಮಾಡ್ತಿದ್ದೀರಾ ಅಂತಾ ತಹಶೀಲ್ದಾರ್ ಪ್ರಶ್ನೆ ಮಾಡಿದ್ದು, ಕೈತೋರಿಸಿ ಮಾತ್ನಾಡ್ಬೇಡ ಎಂದು ತಹಶಿಲ್ದಾರ್ಗೆ ಶಾಸಕರ ಎಚ್ಚರಿಕೆ ಕೊಟ್ಟಿದ್ದಾರೆ. ತಹಶೀಲ್ದಾರ್ ಎಲೆಕ್ಷನ್ಗೆ ನಿಲ್ಲೋ ತಯಾರಿ ಮಾಡ್ತಿದ್ದಾರೆ ಅನ್ನೋ ವದಂತಿ ಹುಟ್ಟಿಕೊಂಡಿದ್ದು, ಮೊಳಕಾಲ್ಮೂರು, ಚಳ್ಳಕೆರೆಯಲ್ಲಿ ಸ್ಪರ್ಧೆಗೆ ತಹಶೀಲ್ದಾರ್ ಸಿದ್ದತೆ ಮಾತು ಕೇಳಿ ಬಂದಿದೆ. ಹೀಗಾಗಿ ಪದೇ-ಪದೇ MLA-ತಹಶೀಲ್ದಾರ್ ನಡುವೆ ವಾಗ್ವಾದ ನಡೀತಿದೆ.
ಇದನ್ನೂ ಓದಿ:ತುಮಕೂರಿನ ಒಂಟಿ ಮನೆಯಲ್ಲಿ ಮೂವರು ಅನಾಥ ಸಹೋದರಿಯರ ನಿಗೂಢ ಸಾವು..! ಶವ ಕೊಳೆತು ವಾಸನೆ ಬಂದ ಬಳಿಕ ಪ್ರಕರಣ ಬೆಳಕಿಗೆ…