ಬೆಳಗಾವಿ: ರಾಜ್ಯ ಸರ್ಕಾರ ಕೊರೋನಾ ಸೋಂಕಿನ ತಡೆಗೆ ಹಲವು ಕಠಿಣ ನಿಯಮಗಳನ್ನು ರೂಪಿಸಿದೆ. ಕೊರೋನಾ ನಿಯಮಗಳನ್ನು ಜನರು ಮುರಿದರೆ ಅವರಿಗೆ ದಂಡ, ಕೇಸ್ ಹಾಕಲಾಗುತ್ತಿದೆ. ಆದರೆ ಆಡಳಿತ ಪಕ್ಷದ ಶಾಸಕರು, ಸಚಿವರು ರೂಲ್ಸ್ ಬ್ರೇಕ್ ಮಾಡಿದರೆ ಅವರ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಇಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ತಾವು ಮಾಸ್ಕ್ ಧರಿಸುವುದಿಲ್ಲ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ವೀಕೆಂಡ್ ಕರ್ಫ್ಯೂ ಮುಂದುವರಿಕೆಗೆ ಹೆಚ್ಚಾಗ್ತಿದೆ ವಿರೋಧ… ಶುಕ್ರವಾರಕ್ಕೇ ಅಂತ್ಯವಾಗುತ್ತಾ ವೀಕೆಂಡ್ ರೂಲ್ಸ್..?
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಲಕ್ಷ್ಮಿ ಉದ್ಯಾನವನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಉಮೇಶ್ ಕತ್ತಿ ಅವರು ಮಾಸ್ಕ್ ಧರಿಸದೆ ಓಡಾಡಿದ್ದರು, ಮಾಸ್ಕ್ ಧರಿಸದಿರುವ ಕುರಿತು ಪತ್ರಕರ್ತರು ಗಮನ ಸೆಳೆದಾಗ ‘ಮಾಸ್ಕ್ ಹಾಕೋದು ಬಿಡೋದು ಅವರಿಗೆ ಬಿಟ್ಟಿದ್ದು. ನಂಗೆ ಮಾಸ್ಕ್ ಹಾಕ್ಬೇಕು ಅನ್ಸಿಲ್ಲ… ನಾನು ಮಾಸ್ಕ್ ಹಾಕಲ್ಲ’ ಎಂದು ಪ್ರತಿಕ್ರಿಯೆ ನೀಡಿದ್ಧಾರೆ.
ಸರ್ಕಾರ ಮಾಡಿರುವ ರೂಲ್ಸ್ ಸಚಿವರಿಗೆ ಅಪ್ಲೈ ಆಗಲ್ವಾ..? ಜವಾಬ್ದಾರಿಯುತ ಸ್ಥಾನದಲ್ಲಿರುವ ನಾಯಕ ಕೊಡುವ ಹೇಳಿಕೆ ಇದೇನಾ? ಜನಸಾಮಾನ್ಯರಿಗೆ ಒಂದು.. ಜನನಾಯಕರಿಗೆ ಒಂದು ನ್ಯಾಯಾನಾ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.